5ತಿರಿಗಿ ಫಿಲಿಷ್ಟಿಯರ ಸಂಗಡ ಯುದ್ಧ ಉಂಟಾಯಿತು. ಆಗ ಯಾಯಾರನ ಮಗ ನಾದ ಎಲ್ಹನಾನನು ಗಿತ್ತಿಯನಾಗಿರುವ ಗೊಲ್ಯಾತನ ಸಹೋದರನಾದ ಲಹ್ಮೀಯನ್ನು ಕೊಂದನು. ಇವನ ಈಟಿಯ ಕಟ್ಟಿಗೆಯು ನೇಯುವ ಕುಂಟೆ ಮರಕ್ಕೆ ಸಮಾನವಾಗಿತ್ತು.
6ಗತ್‌ನಲ್ಲಿ ಯುದ್ಧ ಉಂಟಾಯಿತು; ಅಲ್ಲಿ ಆರಾರು ಪ್ರಕಾರ ಇಪ್ಪತ್ತು ನಾಲ್ಕು ಬೆರಳುಗಳುಳ್ಳ ಉನ್ನತನಾದ ಒಬ್ಬ ಮನುಷ್ಯನಿದ್ದನು.
7ಇವನು ಸಹ ಮಹಾ ಶರೀರ ದವನಾದ ರೆಫಾಯನ ಮಗನಾಗಿದ್ದನು. ಇವನು ಇಸ್ರಾ ಯೇಲನ್ನು ನಿಂದಿಸಿದಾಗ ದಾವೀದನ ಸಹೋದರನಾದ ಶಿಮ್ಮನ ಮಗನಾಗಿರುವ ಯೋನಾತಾನನು ಅವನನ್ನು ಕೊಂದುಬಿಟ್ಟನು.
8ಇವರು ಗತ್‌ನಲ್ಲಿ ಆ ಮಹಾ ಶರೀರದವನಿಗೆ ಹುಟ್ಟಿದರು; ಅವರು ದಾವೀದನ ಕೈಯಿಂದಲೂ ಅವನ ಸೇವಕರ ಕೈಯಿಂದಲೂ ಸತ್ತುಬಿದ್ದರು.