1ಬಾಷನಿಗೆ ವಿರೋಧವಾಗಿ ಹನಾನೀಯ ಮಗನಾದ ಯೇಹುವಿಗೆ ಕರ್ತನ ವಾಕ್ಯ ಉಂಟಾಗಿ ಹೇಳಿದ್ದೇನಂದರೆ--ನಾನು ನಿನ್ನನ್ನು ಧೂಳಿ ಯಲ್ಲಿಂದ ಮೇಲೆತ್ತಿ ನಿನ್ನನ್ನು ನನ್ನ ಜನರಾದ ಇಸ್ರಾ ಯೇಲಿನ ಮೇಲೆ ನಾಯಕನಾಗಿ ಇರಿಸಿದೆನು.
2ಆದರೆ ನೀನು ಯಾರೊಬ್ಬಾಮನ ಮಾರ್ಗದಲ್ಲಿ ನಡೆದು ನನ್ನ ಜನರಾದ ಇಸ್ರಾಯೇಲ್ಯರು ತಮ್ಮ ಪಾಪಗಳಿಂದ ನನಗೆ ಕೋಪವನ್ನು ಎಬ್ಬಿಸುವ ಹಾಗೆ ಅವರನ್ನು ಪಾಪ ಮಾಡಲು ಪ್ರೇರೇಪಿಸಿದಿ.
3ಇಗೋ, ನಾನು ಬಾಷನ ಸಂತತಿಯನ್ನೂ ಅವನ ಮನೆಯ ಸಂತತಿಯನ್ನೂ ತೆಗೆದು ಹಾಕಿ ನಿನ್ನ ಮನೆಯನ್ನು ನೆಬಾಟನ ಮಗನಾದ ಯಾರೊಬ್ಬಾಮನ ಮನೆಯ ಹಾಗೆ ಮಾಡುವೆನು.
4ಬಾಷನ ಕಡೆಯವನಲ್ಲಿ ಪಟ್ಟಣದೊಳಗೆ ಸಾಯುವ ವನನ್ನು ನಾಯಿಗಳು ತಿನ್ನುವವು. ಅವನ ಕಡೆಯವನಲ್ಲಿ ಹೊಲದೊಳಗೆ ಸಾಯುವವನನ್ನು ಆಕಾಶದ ಪಕ್ಷಿಗಳು ತಿನ್ನುವವು.