14ಅದಕ್ಕೆ ಅವನು--ಸಮಾ ಧಾನವೇ ಅಂದನು ಮತ್ತು ಅವನು--ನಿನಗೆ ಹೇಳತಕ್ಕ ಮಾತು ನನಗುಂಟು ಅಂದನು. ಅದಕ್ಕವಳು--ಹೇಳು ಅಂದಳು.
15ಆಗ ಅವನು--ರಾಜ್ಯವು ನನ್ನದಾಗಿತ್ತೆಂದು ನಾನು ಆಳುವ ಹಾಗೆ ಸಮಸ್ತ ಇಸ್ರಾಯೇಲ್ಯರು ನನ್ನ ಮೇಲೆ ಕಣ್ಣಿಟ್ಟಿದ್ದರೆಂದು ನೀನು ಬಲ್ಲೆ.
16ಆದರೆ ರಾಜ್ಯವು ತಿರುಗಿಕೊಂಡು ನನ್ನ ಸಹೋದರನದಾ ಯಿತು; ಅದು ಅವನಿಗೆ ಕರ್ತನಿಂದ ಉಂಟಾಯಿತು. ಈಗ ನಾನು ನಿನ್ನನ್ನು ಒಂದು ಮನವಿ ಕೇಳಿಕೊಳ್ಳುತ್ತೇನೆ; ಅದನ್ನು ಅಲ್ಲಗಳೆಯಬೇಡ ಅಂದನು.
17ಆಕೆಯು ಅವನಿಗೆ--ಹೇಳು ಅಂದಳು. ಆಗ ಅವನು--ನೀನು ದಯಮಾಡಿ ಅರಸನಾದ ಸೊಲೊಮೋನನು ಶೂನೇ ಮ್ಯಳಾದ ಅಬೀಷಗೈಳನ್ನು ನನಗೆ ಹೆಂಡತಿಯಾಗಿ ಕೊಡಲು ಅವನನ್ನು ಕೇಳು;
18ಅವನು ನಿನಗೆ ಆಗುವ ದಿಲ್ಲವೆಂದು ಹೇಳುವದಿಲ್ಲ ಅಂದನು. ಅದಕ್ಕೆ ಬತ್ಷೆಬೆಳುಒಳ್ಳೇದು, ನಿನಗೋಸ್ಕರ ಅರಸನ ಸಂಗಡ ಮಾತ ನಾಡುವೆನು ಅಂದಳು.