1ಆಗ ಚೀಯೋನೆಂಬ ದಾವೀದನ ಪಟ್ಟಣ ದೊಳಗಿಂದ ಕರ್ತನ ಒಡಂಬಡಿಕೆಯ ಮಂಜೂಷವನ್ನು ತರುವ ನಿಮಿತ್ತ ಅರಸನಾದ ಸೊಲೊ ಮೋನನು ಇಸ್ರಾಯೇಲಿನ ಮಕ್ಕಳಲ್ಲಿ ಶ್ರೇಷ್ಠರಾಗಿರುವ ತಂದೆಗಳಾದ ಇಸ್ರಾಯೇಲಿನ ಹಿರಿಯರನ್ನೂ ಗೋತ್ರ ಗಳ ಮುಖ್ಯಸ್ಥರನ್ನೂ ಯೆರೂಸಲೇಮಿನಲ್ಲಿ ತನ್ನ ಬಳಿಗೆ ಕೂಡಿಬರುವಂತೆ ಮಾಡಿದನು.
2ಏಳನೇ ತಿಂಗಳಾದ ಏತಾನೀಮ್ ಎಂಬ ತಿಂಗಳಲ್ಲಿ ಹಬ್ಬವಿದ್ದಾಗ ಇಸ್ರಾ ಯೇಲಿನ ಸಮಸ್ತ ಮನುಷ್ಯರು ಅರಸನಾದ ಸೊಲೊ ಮೋನನ ಬಳಿಗೆ ಕೂಡಿಬಂದರು.
3ಇಸ್ರಾಯೇಲಿನ ಹಿರಿಯರೆಲ್ಲರೂ ಬಂದ ತರುವಾಯ ಯಾಜಕರು ಮಂಜೂಷವನ್ನು ಎತ್ತಿಕೊಂಡು ಕರ್ತನ ಮಂಜೂಷ ವನ್ನೂ ಸಭೆಯ ಗುಡಾರವನ್ನೂ ಗುಡಾರದಲ್ಲಿದ್ದ ಸಮಸ್ತ ಪರಿಶುದ್ಧವಾದ ಸಾಮಾನುಗಳನ್ನೂ ತಂದರು.