1 ಸಾಮುವೇಲು 10

ಸಮುವೇಲನು ರಾಜ್ಯದ ಪದ್ಧತಿ ಯನ್ನು ಜನರಿಗೆ ಹೇಳಿಕೊಟ್ಟು ಒಂದು ಪುಸ್ತಕದಲ್ಲಿ ಬರೆದು ಕರ್ತನ ಮುಂದೆ ಇಟ್ಟನು. ಆಗ ಸಮುವೇಲನು ಜನರನ್ನೆಲ್ಲಾ ಅವರವರ ಮನೆಗೆ ಕಳುಹಿಸಿಬಿಟ್ಟನು.

1 Samuel 10:25 (UKJV) Then Samuel told the people the manner of the kingdom, and wrote it in a book, and laid it up before the LORD. And Samuel sent all the people away, every man to his house.

23ಆಗ ಅವರು ಓಡಿಹೋಗಿ ಅಲ್ಲಿಂದ ಅವನನ್ನು ಕರೆತಂದರು. ಅವನು ಜನರ ಮಧ್ಯದಲ್ಲಿ ನಿಲ್ಲುವಾಗ ಅವನು ತನ್ನ ಭುಜದಿಂದ ಎಲ್ಲಾ ಜನರಿಗಿಂತ ಎತ್ತರವಾಗಿದ್ದನು.

24ಆಗ ಸಮುವೇಲನು ಸಮಸ್ತ ಜನರಿಗೆ--ಕರ್ತನು ಆದುಕೊಂಡವನನ್ನು ನೋಡಿರಿ; ಎಲ್ಲಾ ಜನರಲ್ಲಿ ಇವನಿಗೆ ಸಮಾನನಾದವನು ಯಾವನೂ ಇಲ್ಲವಲ್ಲಾ ಅಂದನು. ಜನರೆಲ್ಲರೂ ಆರ್ಭಟಿಸಿ--ಅರಸನಾದವನು ಬಾಳಲಿ ಅಂದರು.

25ಸಮುವೇಲನು ರಾಜ್ಯದ ಪದ್ಧತಿ ಯನ್ನು ಜನರಿಗೆ ಹೇಳಿಕೊಟ್ಟು ಒಂದು ಪುಸ್ತಕದಲ್ಲಿ ಬರೆದು ಕರ್ತನ ಮುಂದೆ ಇಟ್ಟನು. ಆಗ ಸಮುವೇಲನು ಜನರನ್ನೆಲ್ಲಾ ಅವರವರ ಮನೆಗೆ ಕಳುಹಿಸಿಬಿಟ್ಟನು.

26ಸೌಲನು ಗಿಬೆಯಲ್ಲಿರುವ ತನ್ನ ಮನೆಗೆ ಹೋದನು. ದೇವರು ಯಾರ ಹೃದಯವನ್ನು ಮುಟ್ಟಿದನೋ ಅವ ರದು ಒಂದು ಗುಂಪು ಅವನ ಸಂಗಡ ಹೋಯಿತು.

27ಆದರೆ ಬೆಲಿಯಾಳ ಮಕ್ಕಳು--ಇವನು ಹೇಗೆ ನಮ್ಮನ್ನು ರಕ್ಷಿಸುವನು ಎಂದು ಅವನನ್ನು ತಿರಸ್ಕರಿಸಿ ದರು; ಅವನಿಗೆ ಕಾಣಿಕೆಗಳನ್ನು ತಕ್ಕೊಂಡು ಬರಲಿಲ್ಲ. ಆದರೆ ಅವನು ಕೇಳದವನ ಹಾಗೆ ಇದ್ದನು.

Kannada Bible (Old Version), Bible Society of India.