1 ಸಾಮುವೇಲು 12

ಸಮುವೇಲನು ಇಸ್ರಾಯೇಲ್ಯರೆಲ್ಲರಿಗೆ--ಇಗೋ, ನೀವು ನನಗೆ ಹೇಳಿದ್ದೆಲ್ಲಾದರಲ್ಲಿ ನಿಮ್ಮ ಮಾತು ಕೇಳಿ ನಿಮ್ಮ ಮೇಲೆ ಒಬ್ಬ ಅರಸನನ್ನು ನೇಮಿಸಿದೆನು.

1 Samuel 12:1 (UKJV) And Samuel said unto all Israel, Behold, I have hearkened unto your voice in all that all of you said unto me, and have made a king over you.

1ಸಮುವೇಲನು ಇಸ್ರಾಯೇಲ್ಯರೆಲ್ಲರಿಗೆ--ಇಗೋ, ನೀವು ನನಗೆ ಹೇಳಿದ್ದೆಲ್ಲಾದರಲ್ಲಿ ನಿಮ್ಮ ಮಾತು ಕೇಳಿ ನಿಮ್ಮ ಮೇಲೆ ಒಬ್ಬ ಅರಸನನ್ನು ನೇಮಿಸಿದೆನು.

2ಇಗೋ, ಆ ಅರಸನು ಇನ್ನು ಮುಂದೆ ನಿಮ್ಮನ್ನು ನಡಿಸುತ್ತಾನೆ. ಈಗ ನಾನು ತಲೆನರೆತ ಮುದುಕನಾಗಿದ್ದೇನೆ. ಇಗೋ, ನನ್ನ ಕುಮಾರರು ನಿಮ್ಮ ಸಂಗಡ ಇದ್ದಾರೆ. ನಾನು ನನ್ನ ಬಾಲ್ಯದಿಂದ ಈ ದಿನದ ವರೆಗೂ ನಿಮ್ಮ ಮುಂದೆ ನಡಕೊಂಡಿದ್ದೇನೆ.

3ಇಗೋ, ನಾನು ಇಲ್ಲಿದ್ದೇನೆ; ಕರ್ತನ ಮುಂದೆಯೂ ಆತನ ಅಭಿಷಿಕ್ತನ ಮುಂದೆಯೂ ನನಗೆ ವಿರೋಧವಾಗಿ ಸಾಕ್ಷಿಕೊಡಿರಿ. ನಾನು ಯಾರ ಎತ್ತನ್ನಾದರೂ ಕತ್ತೆಯ ನ್ನಾದರೂ ತೆಗೆದುಕೊಂಡೆನೋ? ಯಾರಿಗಾದರೂ ವಂಚನೆ ಮಾಡಿದೆನೋ? ಯಾರನ್ನಾದರೂ ಹಿಂಸಿಸಿ ದೆನೋ? ಯಾರಿಂದಲಾದರೂ ಕಣ್ಣಿಗೆ ಮರೆಮಾಡುವ ಲಂಚವನ್ನು ತೆಗೆದುಕೊಂಡೆನೋ? ಹೀಗಿದ್ದರೆ ಹೇಳಿರಿ ತಿರಿಗಿಕೊಡುತ್ತೇನೆ ಅಂದನು.

Kannada Bible (Old Version), Bible Society of India.