9ಆತನು ತನ್ನ ಪರಿಶುದ್ಧರ ಕಾಲುಗಳನ್ನು ಕಾಯು ವನು; ಆದರೆ ದುಷ್ಟರು ಕತ್ತಲಲ್ಲಿ ಮೌನವಾಗಿರುವರು; ಶಕ್ತಿಯಿಂದ ಒಬ್ಬನೂ ಜಯಿಸನು.
10ಕರ್ತನ ಸಂಗಡ ವಿವಾದಿಸುವವರು ಮುರಿದು ಚೂರಾಗುವರು. ಆತನು ಆಕಾಶದಲ್ಲಿಂದ ಅವರ ಮೇಲೆ ಗುಡುಗುವನು. ಕರ್ತನು ಲೋಕಾಂತ್ಯದ ವರೆಗೂ ನ್ಯಾಯತೀರಿಸಿ ತನ್ನ ಅರಸನಿಗೆ ಬಲಕೊಡುವನು, ತನ್ನ ಅಭಿಷಿಕ್ತನ ಕೊಂಬನ್ನು ಉನ್ನತಮಾಡುವನು ಎಂಬದು.
11ಎಲ್ಕಾನನು ರಾಮದಲ್ಲಿರುವ ತನ್ನ ಮನೆಗೆ ಹೋದನು; ಆದರೆ ಆ ಹುಡುಗನು ಯಾಜಕನಾದ ಏಲಿಯ ಸಮ್ಮುಖದಲ್ಲಿ ಕರ್ತನನ್ನು ಸೇವಿಸಿದನು.
12ಆದರೆ ಏಲಿಯ ಕುಮಾರರು ಕರ್ತನನ್ನು ಅರಿಯದೆ ಬೆಲಿಯಾಳನ ಮಕ್ಕಳಾಗಿದ್ದರು.
13ಆ ಯಾಜಕರು ಜನರನ್ನು ನಡಿಸಿದ ವಿಧ ಏನಂದರೆ, ಯಾವನಾದರೂ ಬಲಿ ಅರ್ಪಿಸಿದರೆ ಅರ್ಪಿಸಿದ ಆ ಬಲಿಯ ಮಾಂಸವನ್ನು ಬೇಯಿಸುವಾಗ ಯಾಜಕನ ಸೇವಕನು ಮೂರು ಮುಳ್ಳು ಗಳುಳ್ಳ ಕೊಂಡಿಯನ್ನು ತಕ್ಕೊಂಡು