1 ಸಾಮುವೇಲು 3

ದೇವರ ಮಂಜೂಷವಿರುವ ಕರ್ತನ ಮಂದಿರದಲ್ಲಿ ದೇವರ ದೀಪವು ಆರಿಹೋಗು ವದಕ್ಕಿಂತ ಮುಂಚೆ ಸಮುವೇಲನು ಮಲಗಿದ್ದನು; ಆಗ ಕರ್ತನು ಸಮುವೇಲನನ್ನು ಕರೆದನು.

1 Samuel 3:3 (UKJV) And before the lamp of God went out in the temple of the LORD, where the ark of God was, and Samuel was laid down to sleep;

1ಬಾಲಕನಾದ ಸಮುವೇಲನು ಏಲಿಯ ಮುಂದೆ ಕರ್ತನಿಗೆ ಸೇವೆ ಮಾಡಿಕೊಂಡಿ ದ್ದನು. ಆ ದಿನಗಳಲ್ಲಿ ಕರ್ತನ ವಾಕ್ಯವು ವಿರಳವಾಗಿತ್ತು; ಅಲ್ಲಿ ಪ್ರಕಟವಾದ ದೇವದರ್ಶನವಿರಲಿಲ್ಲ.

2ಆ ಕಾಲ ದಲ್ಲಿ ಆದದ್ದೇನಂದರೆ, ಏಲಿಯು ತನ್ನ ಸ್ಥಳದಲ್ಲಿ ಮಲ ಗಿದ್ದನು; ನೋಡುವದಕ್ಕಾಗದಂತೆ ಅವನ ಕಣ್ಣುಗಳು ಮೊಬ್ಬಾಗುತ್ತಿದ್ದವು.

3ದೇವರ ಮಂಜೂಷವಿರುವ ಕರ್ತನ ಮಂದಿರದಲ್ಲಿ ದೇವರ ದೀಪವು ಆರಿಹೋಗು ವದಕ್ಕಿಂತ ಮುಂಚೆ ಸಮುವೇಲನು ಮಲಗಿದ್ದನು; ಆಗ ಕರ್ತನು ಸಮುವೇಲನನ್ನು ಕರೆದನು.

4ಅದಕ್ಕ ವನು--ಇಗೋ, ನಾನು ಇಲ್ಲಿ ಇದ್ದೇನೆ ಎಂದು ಹೇಳಿ ಏಲಿಯ ಬಳಿಗೆ ಓಡಿಹೋಗಿ,--ಇಗೋ, ಇಲ್ಲಿ ಇದ್ದೇನೆ; ನೀನು ನನ್ನನ್ನು ಕರೆದಿಯಲ್ಲಾ ಅಂದನು.

5ಅದಕ್ಕವನು--ನಾನು ನಿನ್ನನ್ನು ಕರೆಯಲಿಲ್ಲ; ಹೋಗಿ ಮಲಗಿಕೋ ಅಂದನು.

Kannada Bible (Old Version), Bible Society of India.