21ಅದಕ್ಕೆ ಸೌಲನು ಅವನಿಗೆ ಪ್ರತ್ಯುತ್ತರ ವಾಗಿ--ನಾನು ಇಸ್ರಾಯೇಲ್ಯರ ಗೋತ್ರಗಳಲ್ಲೆಲ್ಲಾ ಚಿಕ್ಕದಾದ ಬೆನ್ಯಾವಿಾನನ ಗೋತ್ರದವನಲ್ಲವೇ? ಇದ ಲ್ಲದೆ ಬೆನ್ಯಾವಿಾನನ ಗೋತ್ರವು ಸಮಸ್ತ ಗೋತ್ರಗಳಲ್ಲಿ ನನ್ನ ಗೋತ್ರವು ಚಿಕ್ಕದಾದದ್ದಲ್ಲವೇ? ನೀನು ಯಾಕೆ ಹೀಗೆ ನನ್ನ ಸಂಗಡ ಮಾತನಾಡುತ್ತೀ ಅಂದನು.
22ಆಗ ಸಮುವೇಲನು ಸೌಲನನ್ನು ಅವನ ಸೇವಕನನ್ನು ಕರ ತಂದು ಅತಿಥಿಗಳ ಕೊಠಡಿಯಲ್ಲಿ ಮುಖ್ಯವಾದ ಸ್ಥಳ ಕೊಟ್ಟನು.
23ಅವರು ಹೆಚ್ಚು ಕಡಿಮೆ ಮೂವತ್ತು ಜನರಿದ್ದರು. ಸಮುವೇಲನು ಅಡಿಗೆಯವನಿಗೆ--ನಾನು ನಿನ್ನ ಕೈಯಲ್ಲಿ ಕೊಟ್ಟು, ಇಡಬೇಕೆಂದು ಹೇಳಿದ ಪಾಲನ್ನು ತಂದಿಡು ಅಂದನು.
24ಆಗ ಅಡಿಗೆಯವನು ಒಂದು ಮುಂದೊಡೆಯನ್ನೂ ಅದರ ಸಂಗಡ ಇದ್ದದ್ದನ್ನೂ ತಂದು ಅದನ್ನು ಸೌಲನ ಮುಂದೆ ಇಟ್ಟನು. ಆಗ ಸಮುವೇಲನು ಸೌಲನಿಗೆ--ಇಗೋ, ಇದು ನಿನ ಗೋಸ್ಕರ ಪ್ರತ್ಯೇಕಿಸಿದ್ದು ತೆಗೆದುಕೊಂಡು ತಿನ್ನು. ಯಾಕಂದರೆ ನಾನು ಜನರನ್ನು ಕರೆದಿದ್ದೇನೆಂದು ಹೇಳಿದ ಕಾಲದಿಂದ ಈ ವರೆಗೂ ನಿನಗೋಸ್ಕರ ಇಡಲ್ಪಟ್ಟಿತ್ತು ಅಂದನು. ಹಾಗೆಯೇ ಸೌಲನು ಆ ದಿವಸದಲ್ಲಿ ಸಮುವೇಲನ ಸಂಗಡ ಊಟಮಾಡಿದನು.
25ಅವರು ಗುಡ್ಡದಿಂದ ಇಳಿದು ಪಟ್ಟಣಕ್ಕೆ ಬಂದಾಗ ಸಮು ವೇಲನು ಮಾಳಿಗೆಯ ಮೇಲೆ ಸೌಲನ ಸಂಗಡ ಮಾತನಾಡಿದನು.