2 ಉತ್ತರಕಾಲವೃತ್ತಾಂತ 16

ಬಾಷನು ಇದನ್ನು ಕೇಳಿದಾಗ ರಾಮವನ್ನು ಕಟ್ಟಿಸುವದನ್ನು ಬಿಟ್ಟು ತನ್ನ ಕೆಲಸವನ್ನು ನಿಲ್ಲಿಸಿಬಿಟ್ಟನು.

2 Chronicles 16:5 (UKJV) And it came to pass, when Baasha heard it, that he left off building of Ramah, and let his work cease.

3ಇಗೋ, ನಾನು ಬೆಳ್ಳಿಬಂಗಾರ ವನ್ನು ನಿನಗೆ ಕಳುಹಿಸಿದ್ದೇನೆ; ಇಸ್ರಾಯೇಲಿನ ಅರಸ ನಾದ ಬಾಷನು ನನ್ನನ್ನು ಬಿಟ್ಟುಹೋಗುವ ಹಾಗೆ ನೀನು ಹೋಗಿ ಅವನ ಸಂಗಡ ಮಾಡಿದ ಒಡಂಬಡಿ ಕೆಯನ್ನು ಮುರಿಯಬೇಕು ಎಂದು ಹೇಳಿದನು.

4ಬೆನ್ಹದ ದನು ಅರಸನಾದ ಆಸನ ಮಾತು ಕೇಳಿ ತನ್ನ ಸೈನ್ಯಾಧಿ ಪತಿಗಳನ್ನು ಇಸ್ರಾಯೇಲಿನ ಪಟ್ಟಣಗಳ ಮೇಲೆ ಕಳು ಹಿಸಿದನು. ಅವರು ಇಯ್ಯೋನನ್ನೂ ದಾನನನ್ನೂ ಅಬೇ ಲ್ಮಯಿಮ್‌ವನ್ನೂ ನಫ್ತಾಲಿಯನ್ನು ಸಮಸ್ತ ಉಗ್ರಾಣ ಗಳ ಪಟ್ಟಣಗಳನ್ನೂ ಸಂಹರಿಸಿದರು.

5ಬಾಷನು ಇದನ್ನು ಕೇಳಿದಾಗ ರಾಮವನ್ನು ಕಟ್ಟಿಸುವದನ್ನು ಬಿಟ್ಟು ತನ್ನ ಕೆಲಸವನ್ನು ನಿಲ್ಲಿಸಿಬಿಟ್ಟನು.

6ಆಗ ಅರಸನಾದ ಆಸನು ಯೆಹೂದದವರೆಲ್ಲರನ್ನು ಕರಕೊಂಡುಹೋದನು. ಬಾಷನು ಕಟ್ಟಿಸುತ್ತಿದ್ದ ರಾಮದ ಕಲ್ಲುಗಳನ್ನೂ ಅದರ ತೊಲೆಗಳನ್ನೂ ತಕ್ಕೊಂಡು ಹೋದರು; ಅವುಗಳಿಂದ ಗೆಬವನ್ನೂ ಮಿಚ್ಪೆಯನ್ನೂ ಕಟ್ಟಿಸಿದನು.

7ಅದೇ ಕಾಲದಲ್ಲಿ ಪ್ರವಾದಿಯಾದ ಹನಾನಿಯು ಯೆಹೂದದ ಅರಸನಾದ ಆಸನ ಬಳಿಗೆ ಬಂದು ಅವನಿಗೆ -- ನೀನು ನಿನ್ನ ದೇವರಾದ ಕರ್ತನ ಮೇಲೆ ಆತುಕೊಳ್ಳದೆ ಅರಾಮಿನ ಅರಸನ ಮೇಲೆ ಆತು ಕೊಂಡದ್ದರಿಂದ ಅರಾಮಿನ ಅರಸನ ಸೈನ್ಯವು ನಿನ್ನ ಕೈಯಿಂದ ತಪ್ಪಿಸಿಕೊಂಡಿತು.

Kannada Bible (Old Version), Bible Society of India.