10ಈಗ ಕರ್ತನು ತಾನು ಹೇಳಿದ ವಾಕ್ಯವನ್ನು ನೆರ ವೇರಿಸಿದ್ದಾನೆ. ನಾನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ ಎದ್ದು ಕರ್ತನು ಮಾತು ಕೊಟ್ಟ ಪ್ರಕಾರ ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಂಡು ಇಸ್ರಾಯೇಲಿನ ದೇವರಾದ ಕರ್ತನ ಹೆಸರಿಗೆ ಆಲಯ ವನ್ನು ಕಟ್ಟಿಸಿ
11ಕರ್ತನು ಇಸ್ರಾಯೇಲ್ ಮಕ್ಕಳ ಸಂಗಡ ಮಾಡಿದ ಕರ್ತನ ಒಡಂಬಡಿಕೆಯು ಇರುವ ಮಂಜೂಷವನ್ನು ಅದರಲ್ಲಿ ಇರಿಸಿದ್ದೇನೆ.
12ಆಗ ಇಸ್ರಾಯೇಲಿನ ಸಭೆಯ ಸಮ್ಮುಖದಲ್ಲಿ ದೇವರ ಬಲಿಪೀಠದ ಮುಂದೆ ಅವನು ನಿಂತು ತನ್ನ ಕೈಗಳನ್ನು ಚಾಚಿದನು.
13ಸೊಲೊಮೋನನು ಐದು ಮೊಳ ಉದ್ದವೂ ಐದು ಮೊಳ ಅಗಲವೂ ಮೂರು ಮೊಳ ಎತ್ತರವೂ ಆಗಿರುವ ಒಂದು ತಾಮ್ರದ ಪೀಠವನ್ನು ಮಾಡಿಸಿ ಅಂಗಳದ ಮಧ್ಯದಲ್ಲಿ ಅದನ್ನು ಇರಿಸಿ ತಾನು ಅದರ ಮೇಲೆ ನಿಂತು ಇಸ್ರಾಯೇಲಿನ ಸಮಸ್ತ ಸಭೆಯ ಮುಂದೆ ಮೊಣಕಾಲೂರಿ ಆಕಾಶಕ್ಕೆ ತನ್ನ ಕೈಗಳನ್ನು ಚಾಚಿ--
14ಇಸ್ರಾಯೇಲಿನ ದೇವರಾದ ಓ ಕರ್ತನೇ, ಆಕಾಶದಲ್ಲಾದರೂ ಭೂಮಿಯಲ್ಲಾ ದರೂ ನಿನ್ನ ಹಾಗೆ ದೇವರು ಯಾರೂ ಇಲ್ಲ. ತಮ್ಮ ಸಂಪೂರ್ಣ ಹೃದಯದಿಂದ ನಡೆಯುವ ನಿನ್ನ ಸೇವಕರಿ ಗೋಸ್ಕರ ಒಡಂಬಡಿಕೆಯನ್ನು ಕೈಕೊಂಡು ಕೃಪೆಯನ್ನು ತೋರಿಸುತ್ತಿ.