24ನಿನ್ನ ಜನರಾದ ಇಸ್ರಾಯೇಲ್ಯರು ನಿನಗೆ ವಿರೋ ಧವಾಗಿ ಪಾಪಮಾಡಿದ್ದರಿಂದ ತಮ್ಮ ಶತ್ರುವಿನ ಮುಂದೆ ಸೋತು ಹೋದಾಗ ಅವರು ತಿರುಗಿ ಈ ಆಲಯದಲ್ಲಿ ನಿನ್ನ ಮುಂದೆ ನಿನ್ನ ಹೆಸರನ್ನು ಕೊಂಡಾಡಿ
25ಪ್ರಾರ್ಥಿಸಿ ವಿಜ್ಞಾಪನೆ ಮಾಡಿದರೆ ನೀನು ಆಕಾಶದಿಂದ ಕೇಳಿ ನಿನ್ನ ಜನರಾದ ಇಸ್ರಾಯೇಲಿನ ಪಾಪವನ್ನು ಮನ್ನಿಸಿ ನೀನು ಅವರಿಗೂ ಅವರ ತಂದೆಗಳಿಗೂ ಕೊಟ್ಟ ದೇಶಕ್ಕೆ ಅವರನ್ನು ತಿರಿಗಿ ಬರಮಾಡು.
26ಅವರು ನಿನಗೆ ವಿರೋಧವಾಗಿ ಪಾಪಮಾಡಿ ದ್ದರಿಂದ ಆಕಾಶವು ಮುಚ್ಟಲ್ಪಟ್ಟು ಮಳೆ ಇಲ್ಲದಿರು ವಾಗ ನೀನು ಅವರನ್ನು ಶಿಕ್ಷಿಸಿದ್ದರಿಂದ ಅವರು ಈ ಸ್ಥಳದ ಕಡೆಗೆ ಪ್ರಾರ್ಥಿಸಿ ನಿನ್ನ ಹೆಸರನ್ನು ಕೊಂಡಾಡಿ ತಮ್ಮ ಪಾಪವನ್ನು ಬಿಟ್ಟು ತಿರುಗಿಕೊಂಡರೆ
27ನೀನು ಆಕಾಶದಿಂದ ಕೇಳಿ ನಿನ್ನ ಸೇವಕರಾದ ಇಸ್ರಾಯೇಲ್ ಜನರ ಪಾಪವನ್ನು ಮನ್ನಿಸಿ ಅವರು ನಡೆಯಬೇಕಾದ ಒಳ್ಳೇ ಮಾರ್ಗವನ್ನು ಕಲಿಸಿ ಬಾಧ್ಯೆತೆಯಾಗಿ ನಿನ್ನ ಜನರಿಗೆ ಕೊಟ್ಟ ಭೂಮಿಯ ಮೇಲೆ ಮಳೆಯನ್ನು ಕೊಡು.
28ದೇಶದಲ್ಲಿ ಬರವು, ಜಾಡ್ಯವು, ಉರಿಗಾಳಿಯು, ಬೂದಿಯು, ಮಿಡಿತೆ, ಕಂಬಳಿಹುಳ ಇವುಗಳು ಇದ್ದರೆ ಇಲ್ಲವೆ ಅವರ ಶತ್ರುಗಳು ತಮ್ಮ ಸ್ವದೇಶದ ಪಟ್ಟಣ ಗಳಲ್ಲಿ ಅವರನ್ನು ಸಂಕಟಪಡಿಸಿದರೆ ಯಾವ ಬಾಧೆ ಯಾವ ಬೇನೆ ಇದ್ದರೂ ತನ್ನ ಬಾಧೆಯನ್ನೂ ವ್ಯಸನ ವನ್ನೂ ತಿಳಿಯುವ ಒಬ್ಬ ಮನುಷ್ಯನಾದರೂ