2 ರಾಜರು 15

ಇವನು ಕರ್ತನ ಮನೆಗೆ ಎತ್ತರವಾದ ಬಾಗಲನ್ನು ಕಟ್ಟಿಸಿದನು. ಆದರೆ ಉನ್ನತ ಸ್ಥಳಗಳು ತೆಗೆಯಲ್ಪಡಲಿಲ್ಲ; ಜನರು ಇನ್ನೂ ಉನ್ನತ ಸ್ಥಳಗಳ ಮೇಲೆ ಬಲಿಗಳನ್ನೂ ಧೂಪವನ್ನೂ ಅರ್ಪಿಸುತ್ತಿದ್ದರು.

2 Kings 15:35 (UKJV) Nevertheless the high places were not removed: the people sacrificed and burned incense still in the high places. He built the higher gate of the house of the LORD.

33ಅವನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರುಷ ದವನಾಗಿದ್ದು ಯೆರೂಸಲೇಮಿನಲ್ಲಿ ಹದಿನಾರು ವರುಷ ಆಳಿದನು. ಅವನ ತಾಯಿಯು ಚಾದೋಕನ ಮಗಳಾ ಗಿದ್ದ ಯೆರೂಷಳು.

34ಅವನು ತನ್ನ ತಂದೆಯಾದ ಉಜ್ಜೀಯನು ಮಾಡಿದ ಪ್ರಕಾರವೇ ಮಾಡಿ ಕರ್ತನ ಸಮ್ಮುಖದಲ್ಲಿ ಒಳ್ಳೆಯದಾದದ್ದನ್ನು ಮಾಡಿದನು.

35ಇವನು ಕರ್ತನ ಮನೆಗೆ ಎತ್ತರವಾದ ಬಾಗಲನ್ನು ಕಟ್ಟಿಸಿದನು. ಆದರೆ ಉನ್ನತ ಸ್ಥಳಗಳು ತೆಗೆಯಲ್ಪಡಲಿಲ್ಲ; ಜನರು ಇನ್ನೂ ಉನ್ನತ ಸ್ಥಳಗಳ ಮೇಲೆ ಬಲಿಗಳನ್ನೂ ಧೂಪವನ್ನೂ ಅರ್ಪಿಸುತ್ತಿದ್ದರು.

36ಯೋತಾಮನ ಇತರ ಕ್ರಿಯೆಗಳೂ ಅವನು ಮಾಡಿದ ಎಲ್ಲವೂ ಯೆಹೂದದ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.

37ಆ ದಿವಸಗಳಲ್ಲಿ ಕರ್ತನು ಅರಾ ಮ್ಯರ ಅರಸನಾದ ರೆಚೀನನನ್ನೂ ರೆಮಲ್ಯನ ಮಗನಾದ ಪೆಕಹನನ್ನೂ ಯೆಹೂದದ ಮೇಲೆ ಕಳುಹಿಸಲು ಆರಂಭಿ ಸಿದನು.

Kannada Bible (Old Version), Bible Society of India.