2 ರಾಜರು 20

ಇಗೋ, ದಿನಗಳು ಬರುವವು; ಆಗ ನಿನ್ನ ಮನೆಯಲ್ಲಿ ಇರುವದೆಲ್ಲವೂ ನಿನ್ನ ತಂದೆಗಳು ಇಂದಿನ ವರೆಗೂ ಸಂಪಾದಿಸಿ ಇಟ್ಟದ್ದದ್ದೆಲ್ಲವೂ ಬಾಬೆಲಿಗೆ ಒಯ್ಯ ಲ್ಪಡುವದು. ಒಂದೂ ಉಳಿಯುವದಿಲ್ಲವೆಂದು ಕರ್ತನು ಹೇಳುತ್ತಾನೆ;

2 Kings 20:17 (UKJV) Behold, the days come, that all that is in yours house, and that which your fathers have laid up in store unto this day, shall be carried into Babylon: nothing shall be left, says the LORD.

15ಅವನು--ನಿನ್ನ ಮನೆಯಲ್ಲಿ ಅವರು ಏನು ನೋಡಿದರು ಅಂದನು. ಹಿಜ್ಕೀಯನು--ನನ್ನ ಮನೆಯಲ್ಲಿ ಇದ್ದ ಎಲ್ಲವನ್ನೂ ಅವರು ನೋಡಿದ್ದಾರೆ; ನನ್ನ ಬೊಕ್ಕಸಗಳಲ್ಲಿ ನಾನು ಅವರಿಗೆ ತೋರಿಸದೆ ಇದ್ದದ್ದು ಒಂದಾದರೂ ಇಲ್ಲ ಅಂದನು.

16ಆಗ ಯೆಶಾಯನು ಹಿಜ್ಕೀಯನಿಗೆ--ಕರ್ತನ ವಾಕ್ಯವನ್ನು ಕೇಳು.

17ಇಗೋ, ದಿನಗಳು ಬರುವವು; ಆಗ ನಿನ್ನ ಮನೆಯಲ್ಲಿ ಇರುವದೆಲ್ಲವೂ ನಿನ್ನ ತಂದೆಗಳು ಇಂದಿನ ವರೆಗೂ ಸಂಪಾದಿಸಿ ಇಟ್ಟದ್ದದ್ದೆಲ್ಲವೂ ಬಾಬೆಲಿಗೆ ಒಯ್ಯ ಲ್ಪಡುವದು. ಒಂದೂ ಉಳಿಯುವದಿಲ್ಲವೆಂದು ಕರ್ತನು ಹೇಳುತ್ತಾನೆ;

18ನಿನ್ನಿಂದ ಹುಟ್ಟುವ ನಿನ್ನ ಮಕ್ಕಳಲ್ಲಿ ಕೆಲವರನ್ನು ತೆಗೆದುಕೊಂಡು ಹೋಗುವರು. ಅವರು ಬಾಬೆಲಿನ ಅರಸನ ಮನೆಯಲ್ಲಿ ಕಂಚುಕಿಯರಾಗಿರು ವರು ಅಂದನು.

19ಆಗ ಹಿಜ್ಕೀಯನು ಯೆಶಾಯನಿಗೆ ನೀನು ಹೇಳಿದ ಕರ್ತನ ವಾಕ್ಯವು ಉತ್ತಮವಾದದ್ದು ಅಂದನು. ಅವನು--ನನ್ನ ದಿವಸಗಳಲ್ಲಿ ಸಮಾಧಾ ನವೂ ಸತ್ಯವೂ ಇದ್ದರೆ ಅದು ಉತ್ತಮವಲ್ಲವೋ ಅಂದನು.

Kannada Bible (Old Version), Bible Society of India.