11ಆದರೆ ಯೆಹೋಷಾಫಾಟನು -- ಪ್ರವಾದಿಯ ಮೂಲಕವಾಗಿ ಕರ್ತನನ್ನು ಕೇಳುವ ಹಾಗೆ ಇಲ್ಲಿ ಕರ್ತನ ಪ್ರವಾದಿಯು ಯಾವನೂ ಇಲ್ಲವೋ ಅಂದನು. ಆಗ ಇಸ್ರಾಯೇಲ್ಯರ ಅರಸನ ಸೇವಕರಲ್ಲಿ ಒಬ್ಬನು ಪ್ರತ್ಯು ತ್ತರವಾಗಿ--ಎಲೀಯನ ಕೈಗಳ ಮೇಲೆ ನೀರು ಹೊಯಿದ ಶಾಫಾಟನ ಮಗನಾದ ಎಲೀಷನು ಇಲ್ಲಿದ್ದಾನೆಂದು ಹೇಳಿದನು. ಆಗ ಯೆಹೋಷಾಫಾಟನು--ಅವನ ಬಳಿ ಯಲ್ಲಿ ಕರ್ತನ ವಾಕ್ಯ ಉಂಟು ಅಂದನು.
12ಇಸ್ರಾಯೇ ಲಿನ ಅರಸನೂ ಯೆಹೋಷಾಫಾಟನೂ ಎದೋಮಿನ ಅರಸನೂ ಅವನ ಬಳಿಗೆ ಇಳಿದು ಹೋದರು.
13ಎಲೀ ಷನು ಇಸ್ರಾಯೇಲಿನ ಅರಸನಿಗೆ -- ನಿನ್ನೊಂದಿಗೆ ನಾನೇನು ಮಾಡಬೇಕು? ನೀನು ನಿನ್ನ ತಂದೆ ತಾಯಿಯ ಪ್ರವಾದಿಗಳ ಬಳಿಗೆ ಹೋಗು ಅಂದನು. ಇಸ್ರಾಯೇ ಲಿನ ಅರಸನು ಅವನಿಗೆ--ಇಲ್ಲ, ಕರ್ತನು ಈ ಮೂರು ಮಂದಿ ಅರಸರುಗಳನ್ನು ಮೋವಾಬ್ಯರ ಕೈಯಲ್ಲಿ ಒಪ್ಪಿಸಿ ಕೊಡುವದಕ್ಕೆ ಒಟ್ಟಾಗಿ ಕರೆದಿದ್ದಾನಲ್ಲಾ ಅಂದನು.
14ಆಗ ಎಲೀಷನು--ನಾನು ಯಾವಾತನ ಸಮ್ಮುಖ ದಲ್ಲಿ ನಿಂತಿರುತ್ತೇನೋ ಆ ಸೈನ್ಯಗಳ ಕರ್ತನ ಜೀವದಾಣೆ, ನಿಶ್ಚಯವಾಗಿ ಯೆಹೂದದ ಅರಸನಾದ ಯೆಹೋಷಾ ಫಾಟನ ಸಮ್ಮುಖವನ್ನು ನಾನು ಗೌರವಿಸದಿದ್ದರೆ ನಾನು ನಿನ್ನ ಕಡೆ ಕಣ್ಣಿಡುವದಿಲ್ಲ, ನೋಡುವದೂ ಇಲ್ಲ.
15ಆದರೆ ಈಗ ವಾದ್ಯ ಬಾರಿಸುವವನನ್ನು ನನ್ನ ಬಳಿಗೆ ಕರಕೊಂಡು ಬಾ ಅಂದನು. ಆಗ ವಾದ್ಯ ಬಾರಿಸುವ ವನು ಬಾರಿಸಿದಾಗ ಕರ್ತನ ಕೈ ಅವನ ಮೇಲೆ ಬಂತು.