2 ರಾಜರು 9

ಅವನು ಅಲ್ಲಿ ಸೇರಿದಾಗ ಇಗೋ, ಸೈನ್ಯಾಧಿಪತಿಗಳು ಕುಳಿತುಕೊಂಡಿದ್ದರು. ಆಗ ಅವನು -- ಅಧಿಪತಿಯೇ, ನಿನಗೆ ಹೇಳಬೇಕಾದ ಮಾತು ನನಗೆ ಉಂಟು ಅಂದನು. ಯೇಹುವು ಅವ ನಿಗೆ--ನಮ್ಮೆಲ್ಲರಲ್ಲಿ ಯಾರಿಗೆ ಅಂದನು. ಅವನುಅಧಿಪತಿಯೇ, ನಿನಗೆ ಅಂದನು.

2 Kings 9:5 (UKJV) And when he came, behold, the captains of the host were sitting; and he said, I have an errand to you, O captain. And Jehu said, Unto which of all us? And he said, To you, O captain.

3ಅವನಿಗೆ--ಇಸ್ರಾಯೇಲಿನ ಮೇಲೆ ಅರಸನಾಗಿರಲು ನಿನ್ನನ್ನು ಅಭಿಷೇಕಿಸಿದ್ದೇನೆ ಎಂದು ಕರ್ತನು ಹೇಳುತ್ತಾನೆಂಬದಾಗಿ ಹೇಳಿ ಕದವನ್ನು ತೆರೆದು ತಡಮಾಡದೆ ಓಡಿಹೋಗು ಅಂದನು.

4ಹಾಗೆಯೇ ಆ ಯೌವನಸ್ಥನು ಅಂದರೆ ಪ್ರವಾದಿ ಯಾದ ಆ ಯೌವನಸ್ಥನು ಗಿಲ್ಯಾದಿನಲ್ಲಿರುವ ರಾಮೋತಿಗೆ ಹೋದನು.

5ಅವನು ಅಲ್ಲಿ ಸೇರಿದಾಗ ಇಗೋ, ಸೈನ್ಯಾಧಿಪತಿಗಳು ಕುಳಿತುಕೊಂಡಿದ್ದರು. ಆಗ ಅವನು -- ಅಧಿಪತಿಯೇ, ನಿನಗೆ ಹೇಳಬೇಕಾದ ಮಾತು ನನಗೆ ಉಂಟು ಅಂದನು. ಯೇಹುವು ಅವ ನಿಗೆ--ನಮ್ಮೆಲ್ಲರಲ್ಲಿ ಯಾರಿಗೆ ಅಂದನು. ಅವನುಅಧಿಪತಿಯೇ, ನಿನಗೆ ಅಂದನು.

6ಅವನು ಎದ್ದು ಮನೆಯೊಳಕ್ಕೆ ಹೋದನು. ಆಗ ಇವನು ಎಣ್ಣೆ ಯನ್ನು ಅವನ ತಲೆಯ ಮೇಲೆ ಹೊಯ್ದು ಅವನಿಗೆ ಹೇಳಿದ್ದು--ಇಸ್ರಾಯೇಲಿನ ದೇವರಾದ ಕರ್ತನು ಹೇಳುವದೇನಂದರೆ, ಕರ್ತನ ಜನರಾದ ಇಸ್ರಾ ಯೇಲಿನ ಮೇಲೆ ಅರಸನಾಗಿರಲು ನಿನ್ನನ್ನು ಅಭಿಷೇ ಕಿಸಿದ್ದೇನೆ.

7ಪ್ರವಾದಿಗಳಾದ ನನ್ನ ಸೇವಕರ ರಕ್ತ ಕ್ಕೋಸ್ಕರವೂ ಕರ್ತನ ಎಲ್ಲಾ ಸೇವಕರ ರಕ್ತಕ್ಕೋಸ್ಕ ರವೂ ಈಜೆಬೆಲಳಿಗೆ ಮುಯ್ಯಿಗೆ ಮುಯ್ಯಿ ತೀರಿ ಸುವ ಹಾಗೆಯೂ ನೀನು ನಿನ್ನ ಯಜಮಾನ ನಾದ ಅಹಾಬನ ಮನೆಯವರನ್ನು ಸಂಹರಿಸಬೇಕು.

Kannada Bible (Old Version), Bible Society of India.