2 ಸಾಮುವೇಲು 14

ಹಾಗೆಯೇ ಯೋವಾಬನು ಅರಸನ ಬಳಿಗೆ ಹೋಗಿ ತಿಳಿಸಿದ್ದರಿಂದ ಅರಸನು ಅಬ್ಷಾ ಲೋಮನನ್ನು ಕರೆಸಿದನು. ಆಗ ಅವನು ಅರಸನ ಬಳಿಗೆ ಬಂದು ಸಾಷ್ಟಾಂಗನಮಸ್ಕಾರ ಮಾಡಿದನು. ಆಗ ಅರಸನು ಅಬ್ಷಾಲೋಮನನ್ನು ಮುದ್ದಿಟ್ಟನು.

2 Samuel 14:33 (UKJV) So Joab came to the king, and told him: and when he had called for Absalom, he came to the king, and bowed himself on his face to the ground before the king: and the king kissed Absalom.

31ಆಗ ಯೋವಾಬನು ಎದ್ದು ಅಬ್ಷಾಲೋಮನ ಮನೆಗೆ ಬಂದು ಅವನಿಗೆ--ನನ್ನ ಹೊಲವನ್ನು ನಿನ್ನ ಸೇವಕರು ಬೆಂಕಿಯಿಂದ ಸುಟ್ಟುಬಿಟ್ಟದ್ದೇನು ಎಂದು ಕೇಳಿದನು.

32ಅಬ್ಷಾಲೋಮನು ಯೋವಾಬನಿಗೆ--ಇಗೋ, ನಾನು ಗೆಷೂರಿನಿಂದ ಯಾಕೆ ಬಂದೆನೆಂದು ಅರಸನಿಗೆ ಹೇಳುವದಕ್ಕೆ ನಿನ್ನನ್ನು ಕಳುಹಿಸುವ ಹಾಗೆ ಇಲ್ಲಿಗೆ ಬಾ ಎಂದು ನಿನ್ನನ್ನು ಕರೇಕಳುಹಿಸಿದೆನು. ನಾನು ಇನ್ನೂ ಅಲ್ಲಿಯೇ ಇದ್ದಿದ್ದರೆ ನನಗೆ ಉತ್ತಮವಾಗಿತ್ತು. ಈಗ ನಾನು ಅರಸನ ಮುಖವನ್ನು ನೋಡಬೇಕು; ನನ್ನಲ್ಲಿ ಅಕ್ರಮ ಇದ್ದರೆ ಅವನು ನನ್ನನ್ನು ಕೊಂದುಹಾಕಲಿ ಅಂದನು.

33ಹಾಗೆಯೇ ಯೋವಾಬನು ಅರಸನ ಬಳಿಗೆ ಹೋಗಿ ತಿಳಿಸಿದ್ದರಿಂದ ಅರಸನು ಅಬ್ಷಾ ಲೋಮನನ್ನು ಕರೆಸಿದನು. ಆಗ ಅವನು ಅರಸನ ಬಳಿಗೆ ಬಂದು ಸಾಷ್ಟಾಂಗನಮಸ್ಕಾರ ಮಾಡಿದನು. ಆಗ ಅರಸನು ಅಬ್ಷಾಲೋಮನನ್ನು ಮುದ್ದಿಟ್ಟನು.

Kannada Bible (Old Version), Bible Society of India.