23ಅರೌನನು ಇವುಗಳನ್ನೆಲ್ಲಾ ಅರಸನ ಸೇವಕನಾದ ನಾನು ಅರಸನಿಗೆ ಕೊಟ್ಟೆನು. ಇದಲ್ಲದೆ ಅರೌನನು ಅರಸನಿಗೆ--ನಿನ್ನ ದೇವರಾದ ಕರ್ತನು ನಿನ್ನನ್ನು ಅಂಗೀಕರಿಸಲಿ ಅಂದನು.
24ಆದರೆ ಅರಸನು ಅರೌನನಿಗೆ--ಹಾಗಲ್ಲ; ನಿಶ್ಚಯವಾಗಿ ನಿನ್ನಿಂದ ಕ್ರಯಕ್ಕೆ ಕೊಂಡುಕೊಳ್ಳುತ್ತೇನೆ; ಉಚಿತವಾಗಿ ಬಂದ ದಹನ ಬಲಿಗಳನ್ನು ನನ್ನ ದೇವರಾದ ಕರ್ತನಿಗೆ ಅರ್ಪಿ ಸೆನು ಅಂದನು. ಹೀಗೆ ದಾವೀದನು ಆ ಕಣವನ್ನೂ ಎತ್ತುಗಳನ್ನೂ ಐವತ್ತು ಶೇಕೆಲ್ ಬೆಳ್ಳಿಗೆ ಕೊಂಡು ಕೊಂಡನು.
25ಆಗ ದಾವೀದನು ಕರ್ತನಿಗೆ ಅಲ್ಲಿ ಬಲಿಪೀಠವನ್ನು ಕಟ್ಟಿಸಿ ದಹನಬಲಿಗಳನ್ನೂ ಸಮಾ ಧಾನದಬಲಿಗಳನ್ನೂ ಅರ್ಪಿಸಿದನು. ಹೀಗೆ ಕರ್ತನು ದೇಶಕ್ಕೋಸ್ಕರ ಬಿನ್ನಹವನ್ನು ಕೇಳಿದ್ದರಿಂದ ಇಸ್ರಾ ಯೇಲಿನ ಕಡೆಯಿಂದ ಆ ಬಾಧೆಯು ನಿಂತಿತು.