16ಅವಳ ಗಂಡನು ಅವಳ ಸಂಗಡ ಬಹುರೀಮಿನ ವರೆಗೂ ಅಳುತ್ತಾ ಅವಳ ಹಿಂದೆ ಹೋದನು. ಆಗ ಅಬ್ನೇರನು ಅವನಿಗೆತಿರುಗಿ ಹೋಗು ಅಂದನು; ಅವನು ತಿರುಗಿ ಹೋದನು.
17ಅಬ್ನೇರನು ಇಸ್ರಾಯೇಲಿನ ಹಿರಿಯರ ಸಂಗಡ ಮಾತನಾಡಿ--ದಾವೀದನು ನಿಮ್ಮ ಮೇಲೆ ಅರಸನಾಗಿ ರುವದಕ್ಕೆ ನೀವು ಕಳೆದ ಕಾಲದಲ್ಲಿ ಹುಡುಕುತ್ತಿದ್ದಿರಿ.
18ಆದರೆ ಈಗ ಅದನ್ನು ಮಾಡಿರಿ; ಯಾಕಂದರೆ--ನಾನು ನನ್ನ ಜನರಾದ ಇಸ್ರಾಯೇಲನ್ನು ಫಿಲಿಷ್ಟಿಯರ ವಶದಿಂದಲೂ ಅವರ ಎಲ್ಲಾ ಶತ್ರುಗಳ ವಶದಿಂದಲೂ ನನ್ನ ದಾಸನಾದ ದಾವೀದನ ಕೈಯಿಂದ ತಪ್ಪಿಸಿ ರಕ್ಷಿಸು ವೆನು ಎಂದು ಕರ್ತನು ದಾವೀದನ ವಿಷಯದಲ್ಲಿ ಹೇಳಿದ್ದಾನೆ ಅಂದನು.
19ಇದಲ್ಲದೆ ಅಬ್ನೇರನು ಬೆನ್ಯಾವಿಾನ್ಯನವರ ಸಂಗಡ ಮಾತನಾಡಿದನು. ಅಬ್ನೇ ರನು ಇಸ್ರಾಯೇಲ್ಯರ ದೃಷ್ಟಿಗೂ ಬೆನ್ಯಾವಿಾನನ ಮನೆಯವರೆಲ್ಲರ ದೃಷ್ಟಿಗೂ ಒಳ್ಳೇದಾಗಿ ತೋರಿದ್ದ ನ್ನೆಲ್ಲಾ ದಾವೀದನಿಗೆ ತಿಳಿಸುವದಕ್ಕೆ ಹೆಬ್ರೋನಿಗೆ ಹೋದನು.
20ಹೀಗೆಯೇ ಅಬ್ನೇರನು ತನ್ನ ಸಂಗಡ ಇಪ್ಪತ್ತು ಜನರನ್ನು ಕರಕೊಂಡು ಹೆಬ್ರೋನಿನಲ್ಲಿರುವ ದಾವೀದನ ಬಳಿಗೆ ಬಂದನು. ದಾವೀದನು ಅಬ್ನೇರ ನಿಗೂ ಅವನ ಸಂಗಡ ಬಂದ ಜನರಿಗೂ ಔತಣ ಮಾಡಿಸಿದನು.