37ಅದಕ್ಕೆ ಪೌಲನು--ಅವರು ವಿಚಾರಣೆ ಮಾಡದೆ ರೋಮ ನ್ನರಾದ ನಮ್ಮನ್ನು ಎಲ್ಲರ ಮುಂದೆ ಹೊಡಿಸಿ ಸೆರೆಮನೆ ಯೊಳಗೆ ಹಾಕಿಸಿದರು; ಈಗ ನಮ್ಮನ್ನು ಗುಪ್ತವಾಗಿ ಹೊರಗೆ ಕಳುಹಿಸುತ್ತಾರೋ? ಹಾಗೆ ಎಂದಿಗೂ ಆಗಕೂಡದು; ಅವರೇ ಬಂದು ನಮ್ಮನ್ನು ಹೊರಗೆ ಕರಕೊಂಡು ಹೋಗಲಿ ಎಂದು ಹೇಳಿ
38ಸಿಪಾಯಿಗಳು ಈ ಮಾತುಗಳನ್ನು ನ್ಯಾಯಾಧಿಪತಿ ಗಳಿಗೆ ತಿಳಿಸಿದಾಗ ಅವರು ರೋಮನ್ನರು ಎಂಬ ಮಾತನ್ನು ಕೇಳಿ ಭಯಪಟ್ಟರು.
39ಅವರ ಬಳಿಗೆ ಬಂದು ಅವರು ವಿನಯವಾಗಿ ಮಾತನಾಡಿ ಹೊರಗೆ ಕರೆದುಕೊಂಡು ಹೋಗಿ ಊರನ್ನು ಬಿಟ್ಟು ಹೋಗ ಬೇಕೆಂದು ಅವರನ್ನು ಬೇಡಿಕೊಂಡರು.
40ಆಗ ಅವರು ಸೆರೆಮನೆಯೊಳಗಿಂದ ಹೊರಟು ಲುದ್ಯಳ ಮನೆಗೆ ಬಂದು ಸಹೋದರರನ್ನು ನೋಡಿ ಅವರನ್ನು ಧೈರ್ಯಗೊಳಿಸಿ ಹೊರಟು ಹೋದರು.