3ಪ್ರಾಮುಖ್ಯ ವಾಗಿ ಯೆಹೂದ್ಯರ ಮಧ್ಯದಲ್ಲಿರುವ ಎಲ್ಲಾ ಆಚಾರ ಗಳನ್ನೂ ವಿವಾದಗಳನ್ನೂ ನೀನು ಚೆನ್ನಾಗಿ ಬಲ್ಲವನಾಗಿರು ವದರಿಂದ ಸಹನೆಯಿಂದ ನನ್ನ ಮಾತುಗಳನ್ನು ಕೇಳ ಬೇಕೆಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ.
4ನಾನು ಮೊದಲಿನಿಂದಲೂ ಯೆರೂಸಲೇಮಿನಲ್ಲಿರುವ ನನ್ನ ಸ್ವಂತ ಜನಾಂಗದವರ ಮಧ್ಯದಲ್ಲಿ ಬಾಲ್ಯದಿಂದ ನಾನು ಬದುಕಿದ ವಿಧಾನವು ಎಲ್ಲಾ ಯೆಹೂದ್ಯರಿಗೆ ತಿಳಿದದೆ.
5ನಮ್ಮ ಮತದ ಬಹು ನಿಷ್ಠೆಯ ಪಂಗಡಕ್ಕನುಸಾರವಾಗಿ ನಾನು ಒಬ್ಬ ಫರಿಸಾಯನಾಗಿ ಬದುಕಿರುವದನ್ನು ಮೊದಲಿನಿಂದಲೂ ತಿಳಿದವರಾದ ಇವರು ಸಾಕ್ಷಿ ಕೊಡಬೇಕೆಂದಿದ್ದರೆ ಕೊಡಲಿ.
6ಈಗಲೂ ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನದ ನಿರೀಕ್ಷೆಯ ವಿಷಯದಲ್ಲಿ ನಾನು ವಿಚಾರಿಸಲ್ಪಡು ವವನಾಗಿ ನಿಂತುಕೊಂಡಿದ್ದೇನೆ.
7ನಮ್ಮ ಹನ್ನೆರಡು ಗೋತ್ರದವರು ಆಸಕ್ತಿಯಿಂದ ಹಗಲಿರುಳು ದೇವರನ್ನು ಸೇವಿಸುತ್ತಾ ಈ ವಾಗ್ದಾನದ ನೆರವೇರಿಕೆಗಾಗಿ ನಿರೀಕ್ಷಿಸುತ್ತಿದ್ದಾರೆ; ಅಗ್ರಿಪ್ಪ ರಾಜನೇ, ಈ ನಿರೀಕ್ಷೆಯ ವಿಷಯಕ್ಕಾಗಿಯೇ ಯೆಹೂದ್ಯರು ನನ್ನ ಮೇಲೆ ತಪ್ಪುಹೊರಿಸುತ್ತಾರೆ.