ಎಸ್ತೇರ್ 9

ಆಗ ಯೆಹೂದ್ಯರು ತಾವು ಆರಂಭಮಾಡಿದ ಹಾಗೆಯೂ ಮೊರ್ದೆಕೈ ತಮಗೆ ಬರೆದ ಪ್ರಕಾರವಾಗಿಯೂ ಮಾಡಲು ಒಪ್ಪಿಕೊಂಡರು.

Esther 9:23 (UKJV) And the Jews undertook to do as they had begun, and as Mordecai had written unto them;

21ಮೊರ್ದೆಕೈಯು ಈ ವರ್ತಮಾನಗಳನ್ನು ಬರೆದು ಅಹಷ್ವೇರೋಷನ ಸಕಲ ಪ್ರಾಂತ್ಯಗಳಲ್ಲಿ ಸವಿಾಪ ವಾಗಿಯೂ ದೂರವಾಗಿಯೂ ಇರುವ ಸಕಲ ಯೆಹೂ ದ್ಯರಿಗೆ ಪತ್ರಗಳನ್ನು ಕಳುಹಿಸಿದನು.

22ಏನಂದರೆ, ಆ ದಿವಸಗಳಲ್ಲಿ ಯೆಹೂದ್ಯರು ತಮ್ಮ ಶತ್ರುಗಳಿಂದ ತಪ್ಪಿಸಿಕೊಂಡು ವಿಶ್ರಾಂತಿ ಹೊಂದಿದರು. ಆ ತಿಂಗಳು ದುಃಖದಿಂದ ಸಂತೋಷಕ್ಕೂ ಗೋಳಾಡುವಿಕೆಯಿಂದ ಸುದಿನಕ್ಕೂ ಅವರಿಗೆ ಬದಲಾಯಿತು. ಆದದರಿಂದ ಅವರು ಆ ದಿವಸಗಳನ್ನು ಹಬ್ಬದ ದಿವಸಗಳಾಗಿಯೂ ಸಂತೋಷದ ದಿವಸಗಳಾಗಿಯೂ ಒಬ್ಬರಿಗೊಬ್ಬರು ಭಾಗಗಳನ್ನು ಕಳುಹಿಸುವ ದಿವಸಗಳಾಗಿಯೂ ಬಡವ ರಿಗೆ ದಾನಗಳನ್ನು ಕೊಡುವ ದಿವಸಗಳಾಗಿಯೂ ಮಾಡಬೇಕು ಎಂಬದು.

23ಆಗ ಯೆಹೂದ್ಯರು ತಾವು ಆರಂಭಮಾಡಿದ ಹಾಗೆಯೂ ಮೊರ್ದೆಕೈ ತಮಗೆ ಬರೆದ ಪ್ರಕಾರವಾಗಿಯೂ ಮಾಡಲು ಒಪ್ಪಿಕೊಂಡರು.

24ಸಮಸ್ತ ಯೆಹೂದ್ಯರಿಗೂ ವೈರಿಯಾದ, ಅಗಾಗ ನಾದ, ಹಮ್ಮೆದಾತನ ಮಗನಾದ ಹಾಮಾನನು ಯೆಹೂದ್ಯರನ್ನು ನಾಶ ಮಾಡಲು ಯೋಚನೆ ಮಾಡಿ ಕೊಂಡು ಅವರನ್ನು ಹಾಳುಮಾಡುವ ಹಾಗೆಯೂ ನಾಶಮಾಡುವ ಹಾಗೆಯೂ ಪೂರೆಂಬ ಚೀಟನ್ನು ಹಾಕಿದನು;

25ಎಸ್ತೇರಳು ಅರಸನ ಮುಂದೆ ಬಂದಾಗ ಹಾಮಾನನು ಯೆಹೂದ್ಯರಿಗೆ ವಿರೋಧವಾಗಿ ಯೋಚಿಸಿದ ದುರಾಲೋಚನೆಯು ಅವನ ತಲೆಯ ಮೇಲೆ ಬರುವ ಹಾಗೆಯೂ ಅವನೂ ಅವನ ಮಕ್ಕಳೂ ಗಲ್ಲಿಗೆ ಹಾಕಲ್ಪಡುವ ಹಾಗೆಯೂ ಅರಸನು ಪತ್ರ ಗಳಿಂದ ಆಜ್ಞಾಪಿಸಿದನು;

Kannada Bible (Old Version), Bible Society of India.