ಪುರಾತನಾದಿಕಾಂಡ 11

ಪ್ರತಿಯೊಬ್ಬನು ತನ್ನ ನೆರೆಯವ ನಿಂದಲೂ ಪ್ರತಿ ಸ್ತ್ರೀಯು ತನ್ನ ನೆರೆಯವಳಿಂದಲೂ ಬೆಳ್ಳಿ ಬಂಗಾರದ ಒಡವೆಗಳನ್ನು ಕೊಡುವ ಹಾಗೆ ಕೇಳಿಕೊಳ್ಳಬೇಕು.

Exodus 11:2 (UKJV) Speak now in the ears of the people, and let every man borrow of his neighbour, and every woman of her neighbour, jewels of silver and jewels of gold.

1ಆದರೆ ಕರ್ತನು ಮೋಶೆಗೆ--ಇನ್ನೊಂದು ಬಾಧೆಯನ್ನು ಫರೋಹನ ಮೇಲೆಯೂ ಐಗುಪ್ತದ ಮೇಲೆಯೂ ಬರಮಾಡುವೆನು. ಅದಾದ ಮೇಲೆ ಅವನು ನಿಮ್ಮನ್ನು ಕಳುಹಿಸುವನು; ಇಲ್ಲಿಂದ ನಿಮ್ಮನ್ನು ನಿಶ್ಚಯವಾಗಿ ಬಲವಂತದಿಂದ ಎಲ್ಲವನ್ನೂ ಕಳುಹಿಸಿಬಿಡುವನು.

2ಪ್ರತಿಯೊಬ್ಬನು ತನ್ನ ನೆರೆಯವ ನಿಂದಲೂ ಪ್ರತಿ ಸ್ತ್ರೀಯು ತನ್ನ ನೆರೆಯವಳಿಂದಲೂ ಬೆಳ್ಳಿ ಬಂಗಾರದ ಒಡವೆಗಳನ್ನು ಕೊಡುವ ಹಾಗೆ ಕೇಳಿಕೊಳ್ಳಬೇಕು.

3ಇದಲ್ಲದೆ ಕರ್ತನು ಐಗುಪ್ತ್ಯರ ದೃಷ್ಟಿಯಲ್ಲಿ ಜನರಿಗೆ ದಯೆದೊರಕುವಂತೆ ಮಾಡಿದನು. ಆ ಮನುಷ್ಯನಾದ ಮೋಶೆಯು ಐಗುಪ್ತದೇಶದಲ್ಲಿಯೂ ಫರೋಹನ ಸೇವಕರ ದೃಷ್ಟಿಯಲ್ಲಿಯೂ ಜನರ ದೃಷ್ಟಿಯಲ್ಲಿಯೂ ಬಹು ದೊಡ್ಡವನಾಗಿದ್ದನು.

4ಆಗ ಮೋಶೆಯು ಫರೋಹನಿಗೆ--ಕರ್ತನು ಹೀಗೆ ಹೇಳುತ್ತಾನೆ--ಸುಮಾರು ಮಧ್ಯರಾತ್ರಿಯಲ್ಲಿ ನಾನು ಐಗುಪ್ತದ ಮಧ್ಯದಲ್ಲಿ ಹಾದು ಹೋಗುವೆನು.

Kannada Bible (Old Version), Bible Society of India.