44ಆದರೆ ಹಣಕ್ಕೆ ತೆಗೆದುಕೊಂಡ ಪ್ರತಿ ಯೊಬ್ಬನ ಸೇವಕನನ್ನು ನೀನು ಸುನ್ನತಿಮಾಡಿಸಿದ ತರುವಾಯ ಅವನು ಅದನ್ನು ತಿನ್ನಬಹುದು.
45ಪರ ದೇಶದವರೂ ಕೂಲಿಯವರೂ ಅದನ್ನು ತಿನ್ನಬಾರದು.
46ಒಂದೇ ಮನೆಯಲ್ಲಿ ಅದನ್ನು ತಿನ್ನಬೇಕು. ಆ ಮಾಂಸ ದಲ್ಲಿ ಸ್ವಲ್ಪ ಅಂಶವನ್ನಾದರೂ ಮನೆಯ ಹೊರಗೆ ತೆಗೆದುಕೊಂಡು ಹೋಗಬಾರದು. ಪಶುವಿನ ಒಂದು ಎಲುಬಾದರೂ ಮುರಿಯಬಾರದು.
47ಇಸ್ರಾಯೇಲಿನ ಸಭೆಯೆಲ್ಲಾ ಇದನ್ನು ಆಚರಿಸಬೇಕು.
48ನಿನ್ನ ಜೊತೆ ಯಲ್ಲಿ ಪ್ರವಾಸಮಾಡಿದ ಅನ್ಯನು ಕರ್ತನಿಗೆ ಪಸ್ಕವನ್ನು ಆಚರಿಸಬೇಕೆಂದಿದ್ದರೆ ಅವನ ಗಂಡಸರೆಲ್ಲಾ ಸುನ್ನತಿ ಮಾಡಿಸಿಕೊಳ್ಳಲಿ; ತರುವಾಯ ಅವನು ಅದನ್ನು ಆಚರಿಸುವದಕ್ಕೆ ಸವಿಾಪ ಬರಲಿ; ಅಂಥವನು ಸ್ವದೇಶ ದಲ್ಲಿ ಹುಟ್ಟಿದವನಂತೆ ಇರುವನು. ಆದರೆ ಸುನ್ನತಿ ಮಾಡಿಸಿಕೊಳ್ಳದ ಒಬ್ಬನಾದರೂ ಅದನ್ನು ತಿನ್ನಬಾರದು.