ಪುರಾತನಾದಿಕಾಂಡ 22

ಆದರೆ ಯಜಮಾನನು ಅದರ ಸಂಗಡ ಇದ್ದರೆ ಬದಲು ಕೊಡದೆ ಇರಲಿ. ಅದು ಬಾಡಿಗೆಗೆ ತಂದಿದ್ದರೆ ಅದರ ಬಾಡಿಗೆಯಲ್ಲಿಯೇ ಬಂದಿರುವದು.

Exodus 22:15 (UKJV) But if the owner thereof be with it, he shall not make it good: if it be an hired thing, it came for his hire.

13ಅದು (ಕಾಡು ಮೃಗದಿಂದ) ಕೊಲ್ಲಲ್ಪಟ್ಟಿದ್ದರೆ ಅದನ್ನು ಸಾಕ್ಷಿಗಾಗಿ ತರಲಿ, ಕೊಲ್ಲಲ್ಪಟ್ಟದ್ದಕ್ಕೆ ಬದಲು ಕೊಡಬಾರದು.

14ಒಬ್ಬನು ತನ್ನ ನೆರೆಯವನಿಂದ ಪಶುವನ್ನು ಎರವಾಗಿತಕ್ಕೊಂಡಿರಲಾಗಿ ಒಡೆಯನು ಅದರ ಹತ್ತಿರ ಇಲ್ಲದಿ ರುವಾಗ ಆ ಪಶುವು ಊನವಾದರೆ ಇಲ್ಲವೆ ಅದು ಸತ್ತರೆ ಅದಕ್ಕೆ ಅವನು ಖಂಡಿತವಾಗಿ ಬದಲು ಕೊಡ ಬೇಕು.

15ಆದರೆ ಯಜಮಾನನು ಅದರ ಸಂಗಡ ಇದ್ದರೆ ಬದಲು ಕೊಡದೆ ಇರಲಿ. ಅದು ಬಾಡಿಗೆಗೆ ತಂದಿದ್ದರೆ ಅದರ ಬಾಡಿಗೆಯಲ್ಲಿಯೇ ಬಂದಿರುವದು.

16ಇದಲ್ಲದೆ ಒಬ್ಬನು ನಿಶ್ಚಯಮಾಡದ ಕನ್ನಿಕೆಯನ್ನು ಮೋಸಗೊಳಿಸಿ ಅವಳ ಸಂಗಡ ಮಲಗಿದರೆ ಅವಳು ತನ್ನ ಹೆಂಡತಿಯಾಗುವಂತೆ ಅವಳಿಗೆ ಖಂಡಿತವಾಗಿ ತೆರವು ಕೊಡಬೇಕು.

17ಅವಳ ತಂದೆಗೆ ಆಕೆಯನ್ನು ಕೊಡುವದಕ್ಕೆ ಮನಸ್ಸಿಲ್ಲದಿದ್ದರೆ ಕನ್ನಿಕೆಯ ತೆರವಿನ ಪ್ರಕಾರ ಹಣ ಸಲ್ಲಿಸಬೇಕು.

Kannada Bible (Old Version), Bible Society of India.