ಪುರಾತನಾದಿಕಾಂಡ 3

ಆದಾಗ್ಯೂ ನೀವೆಷ್ಟು ಬಲವಂತ ಮಾಡಿದರೂ ಐಗುಪ್ತದ ಅರಸನು ನಿಮ್ಮನ್ನು ಹೋಗಗೊಡಿಸುವದಿಲ್ಲವೆಂದು ನನಗೆ ನಿಶ್ಚಯವಾಗಿ ತಿಳಿದದೆ.

Exodus 3:19 (UKJV) And I am sure that the king of Egypt will not let you go, no, not by a mighty hand.

17ಐಗುಪ್ತದಲ್ಲಿ ನಿಮಗುಂಟಾಗಿರುವ ಸಂಕಟದಿಂದ ಬಿಡಿಸಿ ನಿಮ್ಮನ್ನು ಕಾನಾನ್ಯರೂ ಹಿತ್ತಿಯರೂ ಅಮೋರಿಯರೂ ಪೆರಿಜೀಯರೂ ಹಿವ್ವಿಯರೂ ಯೆಬೂಸಿಯರೂ ಇರುವ ಹಾಲೂ ಜೇನೂ ಹರಿಯುವ ದೇಶಕ್ಕೆ ಬರಮಾಡುವೆನೆಂದು ಹೇಳಿದ್ದೇನೆ ಎಂದು ಅವರಿಗೆ ಹೇಳು.

18ಅವರು ನಿನ್ನ ಮಾತನ್ನು ಕೇಳುವರು. ಆಗ ನೀನು ಇಸ್ರಾಯೇಲ್‌ ಹಿರಿಯರ ಸಹಿತವಾಗಿ ಐಗುಪ್ತದ ಅರಸನ ಬಳಿಗೆ ಹೋಗಿ ಅವನಿಗೆ--ಇಬ್ರಿಯರ ದೇವರಾಗಿರುವ ಕರ್ತನು ನಮಗೆ ಪ್ರತ್ಯಕ್ಷ ನಾಗಿದ್ದಾನೆ. ಆದದರಿಂದ ನಾವು ಅರಣ್ಯದಲ್ಲಿ ಮೂರು ದಿವಸ ಪ್ರಯಾಣಮಾಡಿ ನಮ್ಮ ದೇವರಾದ ಕರ್ತನಿಗೆ ಬಲಿಯನ್ನರ್ಪಿಸುವ ಹಾಗೆ ನಮ್ಮನ್ನು ಬಿಡು ಎಂದು ಕೇಳಿಕೊಳ್ಳುತ್ತೇವೆ ಎಂದು ಹೇಳಬೇಕು.

19ಆದಾಗ್ಯೂ ನೀವೆಷ್ಟು ಬಲವಂತ ಮಾಡಿದರೂ ಐಗುಪ್ತದ ಅರಸನು ನಿಮ್ಮನ್ನು ಹೋಗಗೊಡಿಸುವದಿಲ್ಲವೆಂದು ನನಗೆ ನಿಶ್ಚಯವಾಗಿ ತಿಳಿದದೆ.

20ಹೀಗಿರುವದರಿಂದ ನನ್ನ ಕೈಯನ್ನು ಚಾಚಿ ನಾನು ಅದರೊಳಗೆ ಮಾಡುವ ಎಲ್ಲಾ ಅದ್ಭುತಗಳಿಂದ ಐಗುಪ್ತವನ್ನು ಹೊಡೆಯುವೆನು. ತರು ವಾಯ ಅವನು ನಿಮ್ಮನ್ನು ಕಳುಹಿಸಿಬಿಡುವನು.

21ಇದಲ್ಲದೆ ಈ ಜನರಿಗೆ ಐಗುಪ್ತ್ಯರ ಕಣ್ಣೆದುರಿನಲ್ಲಿ ದಯೆ ದೊರಕುವಂತೆ ಮಾಡುವೆನು. ನೀವು ಹೋಗುವಾಗ ಬರಿಗೈಯಲ್ಲಿ ಹೋಗುವದಿಲ್ಲ.

Kannada Bible (Old Version), Bible Society of India.