26ಪರಿಶುದ್ಧಾಲಯ ನಿಯಮದ ಮೇರೆಗೆ ತಲಾ ಒಂದು ಬೆಕಾ, ಅಂದರೆ ಅರ್ಧ ಶೆಕೆಲಿನಂತೆ ಇಪ್ಪತ್ತು ಮೊದಲುಗೊಂಡು ಅದಕ್ಕೆ ಮೇಲಿನ ಪ್ರಾಯ ದವರನ್ನು ಲೆಕ್ಕ ಮಾಡಲಾಗಿ ಆರು ಲಕ್ಷ ಮೂರು ಸಾವಿರದ ಐದು ನೂರ ಐವತ್ತು ಗಂಡಸರ ಸಂಖ್ಯೆ ಇತ್ತು.
27ಪರಿಶುದ್ಧಾಲಯದ ಕುಣಿಕೆಗಳಿಗೆ ಮತ್ತು ತೆರೆಗಳ ಕುಣಿಕೆಗಳಿಗೆ ಎರಕ ಹೊಯ್ಯಲು ಒಂದು ನೂರು ತಲಾಂತು ಬೆಳ್ಳಿ ಹಿಡಿಯಿತು; ಒಂದು ಕುಣಿಕೆಗೆ ಒಂದು ತಲಾಂತಿನಂತೆ ನೂರು ಕುಣಿಕೆಗಳಿಗೆ ನೂರು ತಲಾಂತು ಬೆಳ್ಳಿ ಆಯಿತು.
28ಒಂದು ಸಾವಿರದ ಏಳುನೂರ ಎಪ್ಪತ್ತೈದು ಶೆಕೆಲಿನಿಂದ ಅವನು ಕಂಬಗಳಿಗೆ ಕೊಂಡಿಗಳನ್ನೂ ಕಂಬದ ಬೋದಿಗೆ ಮೇಲ್ಹೊದಿಕೆ ಯನ್ನೂ ಅಲಂಕಾರದ ಪಟ್ಟಿಗಳನ್ನೂ ಮಾಡಿದನು.
29ಕಾಣಿಕೆಯಾಗಿ ಬಂದ ಹಿತ್ತಾಳೆಯು ಎಪ್ಪತ್ತು ತಲಾಂತು ಮತ್ತು ಎರಡು ಸಾವಿರದ ನಾಲ್ಕುನೂರು ಶೆಕೆಲುಗಳಾಗಿತ್ತು.
30ಆ ಹಿತ್ತಾಳೆಯಿಂದ ಅವನು ಸಭಾಗುಡಾರದ ದ್ವಾರಗಳಿಗೆ ಕುಣಿಕೆಗಳನ್ನೂ ಬಲಿ ಪೀಠವನ್ನೂ ಅದಕ್ಕೆ ಜಾಲರಿಯನ್ನೂ ಬಲಿಪೀಠದ ಸಮಸ್ತ ಪ್ರಾತ್ರೆಗಳನ್ನೂ ಮಾಡಿದನು.