ಪುರಾತನಾದಿಕಾಂಡ 6

ನಾನೇ ಅಬ್ರಹಾಮನಿಗೂ ಇಸಾಕ ನಿಗೂ ಯಾಕೋಬನಿಗೂ ಸರ್ವಶಕ್ತನಾದ ದೇವರೆಂಬ ನಾಮದಲ್ಲಿ ಕಾಣಿಸಿಕೊಂಡೆನು. ಆದರೆ ಯೆಹೋವ ನೆಂಬ ನನ್ನ ಹೆಸರಿನಿಂದ ನಾನು ಅವರಿಗೆ ಗೋಚರ ವಾಗಲಿಲ್ಲ.

Exodus 6:3 (UKJV) And I appeared unto Abraham, unto Isaac, and unto Jacob, by the name of God Almighty, but by my name JEHOVAH was I not known to them.

1ಕರ್ತನು ಮೋಶೆಗೆ--ನಾನು ಫರೋಹ ನಿಗೆ ಮಾಡುವದನ್ನು ಈಗ ನೀನು ನೋಡುವಿ. ಅವನು ಬಲವಾದ ಹಸ್ತದಿಂದ ಅವರನ್ನು ಹೋಗಗೊಡಿಸಿ ಬಲವಾದ ಹಸ್ತದಿಂದ ಅವನು ಅವ ರನ್ನು ತನ್ನ ದೇಶದೊಳಗಿಂದ ಓಡಿಸುವನು ಅಂದನು.

2ದೇವರು ಮೋಶೆಯ ಸಂಗಡ ಮಾತನಾಡಿ--ನಾನೇ ಕರ್ತನು;

3ನಾನೇ ಅಬ್ರಹಾಮನಿಗೂ ಇಸಾಕ ನಿಗೂ ಯಾಕೋಬನಿಗೂ ಸರ್ವಶಕ್ತನಾದ ದೇವರೆಂಬ ನಾಮದಲ್ಲಿ ಕಾಣಿಸಿಕೊಂಡೆನು. ಆದರೆ ಯೆಹೋವ ನೆಂಬ ನನ್ನ ಹೆಸರಿನಿಂದ ನಾನು ಅವರಿಗೆ ಗೋಚರ ವಾಗಲಿಲ್ಲ.

4ಕಾನಾನ್‌ ದೇಶವನ್ನು ಅಂದರೆ ಅವರು ವಾಸವಾಗಿದ್ದ ಅವರ ಪ್ರವಾಸದ ದೇಶವನ್ನು ನಾನು ಅವರಿಗೆ ಕೊಡುವೆನೆಂದು ಅವರ ಸಂಗಡ ನನ್ನ ಒಡಂಬ ಡಿಕೆಯನ್ನು ದೃಢಪಡಿಸಿದೆನು.

5ಐಗುಪ್ತ್ಯರು ದಾಸರ ನ್ನಾಗಿ ಇಟ್ಟುಕೊಂಡಿರುವ ಇಸ್ರಾಯೇಲ್‌ ಮಕ್ಕಳ ಮೂಲುಗುವಿಕೆಯನ್ನು ಕೇಳಿ ನನ್ನ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡೆನು.

Kannada Bible (Old Version), Bible Society of India.