9ಆಗ ಆತನು ನನಗೆ ಹೇಳಿದ್ದೇನಂದರೆಇಸ್ರಾಯೇಲಿನ ಮತ್ತು ಯೆಹೂದ ಮನೆತನದವರ ಅಕ್ರಮವು ಅತಿ ದೊಡ್ಡದಾಗಿದೆ; ದೇಶವು ರಕ್ತದಿಂದ ತುಂಬಿದೆ; ಪಟ್ಟಣವು ವಕ್ರತ್ವದಿಂದ ತುಂಬಿದೆ; ಯಾಕಂದರೆ ಕರ್ತನು ಭೂಮಿಯನ್ನು ತೊರೆದುಬಿಟ್ಟಿದ್ದಾನೆ; ಕರ್ತನು ನೋಡುವದಿಲ್ಲ ಎಂದು ಅವರು ಹೇಳುತ್ತಾರೆ.
10ಆದದರಿಂದ ನಾನಂತೂ ಕನಿಕರಿಸುವದೂ ಇಲ್ಲ ಕಟಾಕ್ಷಿಸುವದೂ ಇಲ್ಲ ಆದರೆ ಅವರ ಮಾರ್ಗದಲ್ಲಿಯೇ ಅವರ ತಲೆಯ ಮೇಲೆ ಮುಯ್ಯಿತೀರಿಸುವೆನು ಅಂದನು.
11ಇಗೋ, ನಾರುಮಡಿಯನ್ನು ತನ್ನ ಪಕ್ಕೆ ಯಲ್ಲಿ ಧರಿಸಿಕೊಂಡಂಥ ಆ ಮನುಷ್ಯನು ವರ್ತಮಾನ ವನ್ನು ತಂದು ನೀನು ಆಜ್ಞಾಪಿಸಿದ ಹಾಗೆ ಮಾಡಿದ್ದೇನೆ ಅಂದನು.