4ಮಿದ್ಯಾನನ ಕುಮಾರರು ಏಫನೂ ಏಫರನೂ ಹನೋಕನೂ ಅಬೀದನೂ ಎಲ್ದಾವನೂ, ಇವರೆಲ್ಲಾ ಕೆಟೂರಳ ಮಕ್ಕಳು.
5ಆದರೆ ಅಬ್ರಹಾಮನು ತನಗಿದ್ದದ್ದನ್ನೆಲ್ಲಾ ಇಸಾಕ ನಿಗೆ ಕೊಟ್ಟನು.
6ಅಬ್ರಹಾಮನಿಗೆ ಇದ್ದ ಉಪಪತ್ನಿಗಳ ಮಕ್ಕಳಿಗೆ ಅಬ್ರಹಾಮನು ದಾನಗಳನ್ನು ಕೊಟ್ಟು ತಾನು ಜೀವಿಸುತ್ತಿರುವಾಗಲೇ ಅವರನ್ನು ತನ್ನ ಮಗನಾದ ಇಸಾಕನ ಬಳಿಯಿಂದ ಪೂರ್ವದಿಕ್ಕಿನ ಕಡೆಗೆ ಮೂಡಣ ದೇಶಕ್ಕೆ ಕಳುಹಿಸಿದನು.
7ಅಬ್ರಹಾಮನು ಜೀವಿಸಿದ ದಿವಸಗಳು ಒಟ್ಟು ನೂರೆಪ್ಪತ್ತೈದು ವರುಷಗಳು. ಅಬ್ರಹಾಮನು ಪ್ರಾಣ ಬಿಟ್ಟನು.
8ಅವನು ಪೂರ್ಣಾಯುಷ್ಯನಾಗಿ ತುಂಬಾ ಮುದುಕನಾಗಿದ್ದು ಸತ್ತು ತನ್ನ ಜನರೊಂದಿಗೆ ಸೇರಿಸ ಲ್ಪಟ್ಟನು.