ಆದಿಕಾಂಡ 30

ಹೀಗೆ ಅವನಿಗೆ ತನ್ನ ದಾಸಿಯಾದ ಬಿಲ್ಹಳನ್ನು ಕೊಟ್ಟಳು. ಯಾಕೋಬನು ಅವಳ ಬಳಿಗೆ ಹೋದನು.

Genesis 30:4 (UKJV) And she gave him Bilhah her handmaid to wife: and Jacob went in unto her.

2ಅದಕ್ಕೆ ಯಾಕೋಬನು ರಾಹೇಲಳ ಮೇಲೆ ಕೋಪಿಸಿ ಕೊಂಡು--ನಿನಗೆ ಗರ್ಭ ಫಲವನ್ನು ಕೊಡದ ದೇವರ ಸ್ಥಾನದಲ್ಲಿ ನಾನಿದ್ದೇನೋ ಅಂದನು.

3ಅದಕ್ಕೆ ಆಕೆಯು--ಇಗೋ, ನನ್ನ ದಾಸಿಯಾದ ಬಿಲ್ಹಳು ಇದ್ದಾಳೆ. ಅವಳ ಬಳಿಗೆ ಹೋಗು; ಅವಳು ನನ್ನ ಮೊಣಕಾಲಿನ ಮೇಲೆ ಹೆರುವಳು, ಅವಳಿಂದ ನನಗೆ ಮಕ್ಕಳಾಗುವರು ಅಂದಳು.

4ಹೀಗೆ ಅವನಿಗೆ ತನ್ನ ದಾಸಿಯಾದ ಬಿಲ್ಹಳನ್ನು ಕೊಟ್ಟಳು. ಯಾಕೋಬನು ಅವಳ ಬಳಿಗೆ ಹೋದನು.

5ಆಗ ಬಿಲ್ಹಳು ಗರ್ಭಿಣಿಯಾಗಿ ಯಾಕೋಬನಿಗೆ ಮಗನನ್ನು ಹೆತ್ತಳು.

6ರಾಹೇಲಳು--ದೇವರು ನನಗೆ ನ್ಯಾಯತೀರಿಸಿ ನನ್ನ ಮೊರೆ ಕೇಳಿ ನನಗೆ ಮಗನನ್ನು ಕೊಟ್ಟಿದ್ದಾನೆ ಎಂದು ಹೇಳಿದಳು. ಆದದರಿಂದ ಆಕೆಯು ಅವನಿಗೆ ದಾನ್‌ ಎಂದು ಹೆಸರಿಟ್ಟಳು.

Kannada Bible (Old Version), Bible Society of India.