13ನೀನು ಸ್ತಂಭವನ್ನು ಅಭಿಷೇಕಿಸಿ ನನಗೆ ಪ್ರಮಾಣ ಮಾಡಿದ ಬೇತೇಲಿನ ದೇವರು ನಾನೇ. ಈಗ ಎದ್ದು ಈ ದೇಶದೊಳಗಿಂದ ಹೊರಟು ನಿನ್ನ ಬಂಧುಗಳ ದೇಶಕ್ಕೆ ತಿರಿಗಿ ಹೋಗು ಅಂದನು.
14ಆಗ ರಾಹೇಲಳು ಮತ್ತು ಲೇಯಳು ಅವನಿಗೆ--ನಮ್ಮ ತಂದೆಯ ಮನೆಯಲ್ಲಿ ನಮಗೆ ಭಾಗವೂ ಬಾಧ್ಯತೆಯೂ ಇನ್ನೇನದೆ?
15ಅವನು ನಮ್ಮನ್ನು ಅನ್ಯರೆಂದು ಎಣಿಸಿದ್ದಾನಲ್ಲಾ; ಅವನು ನಮ್ಮನ್ನು ಮಾರಿ ನಮ್ಮ ಹಣವನ್ನು ತಾನೇ ನುಂಗಿಬಿಟ್ಟನ್ನಲ್ಲಾ.
16ಆದದರಿಂದ ದೇವರು ನಮ್ಮ ತಂದೆಯಿಂದ ತಕ್ಕೊಂಡ ಐಶ್ವರ್ಯವೆಲ್ಲಾ ನಮ್ಮದು, ನಮ್ಮ ಮಕ್ಕಳದು. ಹಾಗಾದರೆ ಈಗ ದೇವರು ನಿನಗೆ ಹೇಳಿದ್ದನ್ನೆಲ್ಲಾ ಮಾಡು ಅಂದರು.
17ಆಗ ಯಾಕೋಬನು ಎದ್ದು ತನ್ನ ಕುಮಾರರನ್ನೂ ಹೆಂಡತಿಯರನ್ನೂ ಒಂಟೆಗಳ ಮೇಲೆ ಹತ್ತಿಸಿ