ಆದಿಕಾಂಡ 42

ಆಗ ಯೋಸೇಫನು ಅವರಿಗೆ--ನೀವು ಗೂಢಚಾರರೆಂದು ನಾನು ನಿಮಗೆ ಹೇಳಿದ ಮಾತು ನಿಜವೇ.

Genesis 42:14 (UKJV) And Joseph said unto them, That is it that I spoke unto you, saying, All of you are spies:

12ಆದರೆ ಅವನು ಅವರಿಗೆ--ಇಲ್ಲ, ದೇಶದ ಒಳಗುಟ್ಟನ್ನು ನೀವು ತಿಳುಕೊಳ್ಳುವದಕ್ಕೋಸ್ಕರವೇ ಬಂದಿದ್ದೀರಿ ಅಂದನು.

13ಅದಕ್ಕವರು--ನಿನ್ನ ದಾಸರಾದ ನಾವು ಹನ್ನೆರಡು ಮಂದಿ ಸಹೋದರರು; ನಾವು ಕಾನಾನ್‌ ದೇಶದಲ್ಲಿರುವ ಒಬ್ಬ ಮನುಷ್ಯನ ಮಕ್ಕಳು. ಇಗೋ, ಈಗ ಚಿಕ್ಕವನು ನಮ್ಮ ತಂದೆಯೊಂದಿಗೆ ಇದ್ದಾನೆ. ಮತ್ತೊಬ್ಬನು ಇಲ್ಲ ಎಂದು ಹೇಳಿದರು.

14ಆಗ ಯೋಸೇಫನು ಅವರಿಗೆ--ನೀವು ಗೂಢಚಾರರೆಂದು ನಾನು ನಿಮಗೆ ಹೇಳಿದ ಮಾತು ನಿಜವೇ.

15ನೀವು ಪರೀಕ್ಷಿಸಲ್ಪಡುವದು ಹೇಗಂದರೆ--ನಿಮ್ಮ ತಮ್ಮನನ್ನು ಇಲ್ಲಿಗೆ ತಾರದ ಹೊರತು ಫರೋಹನ ಜೀವದಾಣೆ ನೀವು ಇಲ್ಲಿಂದ ಹೊರಗೆ ಹೋಗಬಾರದು.

16ನಿಮ್ಮಲ್ಲಿ ಒಬ್ಬನನ್ನು ಕಳುಹಿಸಿರಿ; ಅವನು ನಿಮ್ಮ ಸಹೋದರ ನನ್ನು ಕರಕೊಂಡು ಬರಲಿ. ಆದರೆ ನೀವು ಸೆರೆಮನೆ ಯಲ್ಲಿರಬೇಕು. ಹೀಗೆ ನಿಮ್ಮಲ್ಲಿ ಸತ್ಯವು ಉಂಟೋ ಇಲ್ಲವೋ ಎಂದು ನಿಮ್ಮ ಮಾತುಗಳು ಪರೀಕ್ಷಿಸಲ್ಪಡು ವವು. ಇಲ್ಲದಿದ್ದರೆ ಫರೋಹನ ಜೀವದಾಣೆ ನಿಶ್ಚಯವಾಗಿ ನೀವು ಗೂಢಚಾರರು ಎಂದು ಹೇಳಿದನು.

Kannada Bible (Old Version), Bible Society of India.