ಆದಿಕಾಂಡ 43

ಅವರು ಚೊಚ್ಚಲನಾದವನು ತನ್ನ ಚೊಚ್ಚಲತನದ ಪ್ರಕಾರವೂ ಕಿರಿಯನು ತನ್ನ ಕಿರಿತನದ ಪ್ರಕಾರವೂ ಅವನ ಮುಂದೆ ಕೂತಿರುವಾಗ ಆ ಮನುಷ್ಯರು ತಮ್ಮ ತಮ್ಮೊಳಗೆ ಆಶ್ಚರ್ಯಪಟ್ಟರು.

Genesis 43:33 (UKJV) And they sat before him, the firstborn according to his birthright, and the youngest according to his youth: and the men marvelled one at another.

31ತರುವಾಯ ಅವನು ಮುಖವನ್ನು ತೊಳೆದು ಹೊರಗೆ ಬಂದನು. ಮನ ಸ್ಸನ್ನು ಬಿಗಿಹಿಡಿದುಕೊಂಡು--ಊಟಕ್ಕೆ ಬಡಿಸಿರಿ ಅಂದನು.

32ಆಗ ಅವರು ಯೋಸೇಫನಿಗೂ ಅವನ ಅಣ್ಣತಮ್ಮಂದಿರಿಗೂ ಅವನ ಸಂಗಡ ಇದ್ದ ಐಗುಪ್ತ್ಯರಿಗೂ ಬೇರೆಬೇರೆಯಾಗಿ ಊಟಕ್ಕೆ ಬಡಿಸಿ ದರು. ಐಗುಪ್ತ್ಯರು ಇಬ್ರಿಯರ ಕೂಡ ಊಟ ಮಾಡುತ್ತಿರಲಿಲ್ಲ. ಅದು ಐಗುಪ್ತ್ಯರಿಗೆ ಅಸಹ್ಯವಾಗಿತ್ತು.

33ಅವರು ಚೊಚ್ಚಲನಾದವನು ತನ್ನ ಚೊಚ್ಚಲತನದ ಪ್ರಕಾರವೂ ಕಿರಿಯನು ತನ್ನ ಕಿರಿತನದ ಪ್ರಕಾರವೂ ಅವನ ಮುಂದೆ ಕೂತಿರುವಾಗ ಆ ಮನುಷ್ಯರು ತಮ್ಮ ತಮ್ಮೊಳಗೆ ಆಶ್ಚರ್ಯಪಟ್ಟರು.

34ಯೋಸೇಫನು ತನ್ನ ಮುಂದಿಟ್ಟಿದ್ದ ಆಹಾರವನ್ನು ಕಳುಹಿಸಿದಾಗ ಬೆನ್ಯಾವಿಾನನಿಗೆ ಕಳುಹಿಸಿದ ಆಹಾರವು ಅವರೆಲ್ಲರ ಆಹಾರಗಳಿಗಿಂತ ಐದರಷ್ಟು ಹೆಚ್ಚಾಗಿತ್ತು. ಅವರು ಅವನ ಸಂಗಡ ಪಾನಮಾಡಿ ಸಂತೋಷದಿಂದ ಇದ್ದರು.

Kannada Bible (Old Version), Bible Society of India.