ಯೋಬು 1

ಅವನಿಗೆ ಏಳುಮಂದಿ ಕುಮಾ ರರೂ ಮೂರು ಮಂದಿ ಕುಮಾರ್ತೆಯರೂ ಹುಟ್ಟಿ ದರು.

Job 1:2 (UKJV) And there were born unto him seven sons and three daughters.

1ಊಚ್‌ ಎಂಬ ದೇಶದಲ್ಲಿ ಒಬ್ಬ ಮನುಷ್ಯನು ಇದ್ದನು. ಅವನ ಹೆಸರು ಯೋಬ. ಆ ಮನುಷ್ಯನು ಸಂಪೂರ್ಣನೂ ಯಥಾರ್ಥನೂ ದೇವರಿಗೆ ಭಯಪಡುವವನೂ ಕೇಡನ್ನು ಬಿಟ್ಟು ತೊಲ ಗುವವನೂ ಆಗಿದ್ದನು.

2ಅವನಿಗೆ ಏಳುಮಂದಿ ಕುಮಾ ರರೂ ಮೂರು ಮಂದಿ ಕುಮಾರ್ತೆಯರೂ ಹುಟ್ಟಿ ದರು.

3ಅವನ ಸಂಪತ್ತು--ಏಳು ಸಾವಿರ ಕುರಿಗಳು, ಮೂರು ಸಾವಿರ ಒಂಟೆಗಳು, ಐನೂರು ಜೋಡು ಎತ್ತುಗಳು, ಐನೂರು ಹೆಣ್ಣು ಕತ್ತೆಗಳೂ ಮತ್ತು ಬಹು ಸೇವಕರ ಸಮೂಹವಿತ್ತು. ಹೀಗೆ ಆ ಮನುಷ್ಯನು ಎಲ್ಲಾ ಮೂಡಣದವರಿಗಿಂತಲೂ ಬಹು ಸ್ವಾಸ್ತ್ಯವುಳ್ಳವ ನಾಗಿದ್ದನು.

4ಅವನ ಕುಮಾರರು ಹೋಗಿ ತಮ್ಮ ತಮ್ಮ ಮನೆಗಳಲ್ಲಿ ಅವನವನ ದಿವಸದಲ್ಲಿ ಔತಣವನ್ನು ಮಾಡಿಸಿ ತಮ್ಮ ಸಂಗಡ ತಿನ್ನುವದಕ್ಕೂ ಕುಡಿಯುವ ದಕ್ಕೂ ತಮ್ಮ ಮೂವರು ಸಹೋದರಿಯರನ್ನು ಕರೆ ಕಳುಹಿಸುತ್ತಿದ್ದರು.

Kannada Bible (Old Version), Bible Society of India.