ಯೋಬು 15

ನಿಷ್ಪ್ರಯೋಜನವಾದ ನುಡಿಗಳಿಂದಲೂ ಕೆಲಸಕ್ಕೆ ಬಾರದ ಮಾತುಗಳಿಂದಲೂ ವಾದಿಸುವನೋ?

Job 15:3 (UKJV) Should he reason with useless talk? or with speeches wherewith he can do no good?

11 ಆಗ ತೇಮಾನ್ಯನಾದ ಎಲೀಫಜನು ಉತ್ತರಕೊಟ್ಟು ಹೇಳಿದ್ದೇನಂದರೆ--

2ಜ್ಞಾನಿಯು ವ್ಯರ್ಥ ತಿಳುವಳಿಕೆಯನ್ನು ನುಡಿದು ಮೂಡಣದ ಗಾಳಿಯಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುವದು ಉಂಟೋ?

3ನಿಷ್ಪ್ರಯೋಜನವಾದ ನುಡಿಗಳಿಂದಲೂ ಕೆಲಸಕ್ಕೆ ಬಾರದ ಮಾತುಗಳಿಂದಲೂ ವಾದಿಸುವನೋ?

4ಹೌದು, ನೀನು ಭಯವನ್ನು ವಿಸರ್ಜಿಸಿ ದೇವರ ಮುಂದಿನ ಧ್ಯಾನವನ್ನು ಕಡಿಮೆಮಾಡುತ್ತೀ.

5ನಿನ್ನ ಬಾಯಿ ನಿನ್ನ ಅಕ್ರಮವನ್ನು ಬೋಧಿಸುತ್ತದೆ; ನೀನು ಕುಯುಕ್ತಿಯುಳ್ಳವರ ನಾಲಿಗೆಯನ್ನು ಆದುಕೊಳ್ಳುತ್ತೀ.

Kannada Bible (Old Version), Bible Society of India.