1ಯೋಬನು ಉತ್ತರ ಕೊಟ್ಟು ಹೇಳಿದ್ದೇನಂದರೆ--
2ಇವುಗಳ ಹಾಗೆ ಅನೇಕವಾದ ವುಗಳನ್ನು ಕೇಳಿದ್ದೇನೆ. ನೀವೆಲ್ಲರೂ ಕಾಟದ ಆದರಣೆ ಕೊಡುವವರೇ.
3ವ್ಯರ್ಥವಾದ ಮಾತುಗಳಿಗೆ ಅಂತ್ಯ ಉಂಟೋ? ಉತ್ತರ ಕೊಡುವ ಹಾಗೆ ನಿನ್ನನ್ನು ಧೈರ್ಯ ಪಡಿಸುವದು ಯಾವದು?
4ನಿಮ್ಮ ಪ್ರಾಣವು ನನ್ನ ಪ್ರಾಣದ ಸ್ಥಳದಲ್ಲಿ ಇದ್ದರೆ ನಾನು ಸಹ ನಿಮ್ಮ ಹಾಗೆ ಮಾತಾಡಬಹುದು; ಮಾತುಗಳನ್ನು ನಿಮ್ಮ ಮೇಲೆ ಕೂಡಿಸಬಹುದು; ನಿಮಗೆ ವಿರೋಧವಾಗಿ ನನ್ನ ತಲೆ ಅಲ್ಲಾಡಿಸಬಹುದು.
5ನನ್ನ ಬಾಯಿಂದ ನಿಮ್ಮನ್ನು ಬಲ ಪಡಿಸುವೆನು. ನನ್ನ ತುಟಿಗಳ ಆದರಣೆ ನಿಮಗೆ ಉಪ ಶಮನ ಮಾಡುವದು.