ಯೋಹಾನ 13

ತಂದೆಯು ತನ್ನ ಕೈಯಲ್ಲಿ ಎಲ್ಲವನ್ನೂ ಕೊಟ್ಟಿದ್ದಾನೆಂತಲೂ ತಾನು ದೇವರ ಬಳಿಯಿಂದ ಹೊರಟು ಬಂದಿದ್ದು ತಿರಿಗಿ ದೇವರ ಬಳಿಗೆ ಹೋಗುತ್ತೇನೆಂತಲೂ ಯೇಸು ತಿಳಿದು ಕೊಂಡು

John 13:3 (UKJV) Jesus knowing that the Father had given all things into his hands, and that he was come from God, and went to God;

11 ಆಗ ಪಸ್ಕ ಹಬ್ಬದ ಮುಂಚೆ ಯೇಸು ತಾನು ಈ ಲೋಕದೊಳಗಿಂದ ತಂದೆಯ ಬಳಿಗೆ ಹೋಗಬೇಕಾದ ತನ್ನ ಗಳಿಗೆಯು ಬಂತೆಂದು ತಿಳಿದು ಈ ಲೋಕದಲ್ಲಿದ್ದ ತನ್ನ ಸ್ವಂತದವರನ್ನು ಪ್ರೀತಿಸಿ ಅವರನ್ನು ಅಂತ್ಯದವರೆಗೆ ಪ್ರೀತಿಸಿದನು.

2ಊಟವಾದ ಮೇಲೆ ಆತನನ್ನು ಹಿಡುಕೊಡಬೇಕೆಂಬದನ್ನು ಸೀಮೋ ನನ ಮಗನಾದ ಯೂದ ಇಸ್ಕರಿಯೋತನ ಹೃದಯದಲ್ಲಿ ಸೈತಾನನು ಆಲೋಚನೆ ಹುಟ್ಟಿಸಿದನು.

3ತಂದೆಯು ತನ್ನ ಕೈಯಲ್ಲಿ ಎಲ್ಲವನ್ನೂ ಕೊಟ್ಟಿದ್ದಾನೆಂತಲೂ ತಾನು ದೇವರ ಬಳಿಯಿಂದ ಹೊರಟು ಬಂದಿದ್ದು ತಿರಿಗಿ ದೇವರ ಬಳಿಗೆ ಹೋಗುತ್ತೇನೆಂತಲೂ ಯೇಸು ತಿಳಿದು ಕೊಂಡು

4ಊಟದಿಂದೆದ್ದು ತನ್ನ ಉಡುಪುಗಳನ್ನು ತೆಗೆದಿಟ್ಟು ಕೈ ಪಾವಡವನ್ನು ತಕ್ಕೊಂಡು ನಡುವನ್ನು ಕಟ್ಟಿಕೊಂಡನು.

5ತರುವಾಯ ಆತನು ಬೋಗುಣಿ ಯಲ್ಲಿ ನೀರು ಹಾಕಿಕೊಂಡು ಶಿಷ್ಯರ ಕಾಲುಗಳನ್ನು ತೊಳೆಯುವದಕ್ಕೂ ತಾನು ನಡುವಿಗೆ ಕಟ್ಟಿಕೊಂಡ ಕೈ ಪಾವಡದಿಂದ ಅವುಗಳನ್ನು ಒರಸುವದಕ್ಕೂ ಪ್ರಾರಂಭಿಸಿದನು.

Kannada Bible (Old Version), Bible Society of India.