13ಹೆಚ್ಚು ಕಡಿಮೆ ನಾಲ್ವತ್ತು ಸಾವಿರ ಜನರು ಯುದ್ಧಕ್ಕೆ ಸಿದ್ಧರಾಗಿ ಕರ್ತನ ಎದುರಿನಲ್ಲಿ ಯುದ್ಧ ಮಾಡುವದಕ್ಕೆ ಯೆರಿಕೋವಿನ ಬೈಲುಗಳಿಗೆ ಹಾದು ಹೋದರು.
14ಆ ದಿನದಲ್ಲಿ ಕರ್ತನು ಯೆಹೋಶುವ ನನ್ನು ಇಸ್ರಾಯೇಲ್ಯರೆಲ್ಲರ ಮುಂದೆ ಘನಪಡಿಸಿದನು. ಅವರು ಮೋಶೆಗೆ ಭಯಪಟ್ಟ ಹಾಗೆಯೇ ಅವನು ಬದುಕಿದ ದಿನಗಳಲ್ಲೆಲ್ಲಾ ಅವನಿಗೂ ಭಯಪಟ್ಟರು.
15ಕರ್ತನು ಯೆಹೋಶುವನ ಸಂಗಡ ಮಾತ ನಾಡಿ --
16ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರಿಗೆ ಯೊರ್ದನಿನಿಂದ ಮೇಲಕ್ಕೆ ಬರುವದಕ್ಕೆ ಆಜ್ಞಾಪಿಸು ಎಂದು ಹೇಳಿದನು.
17ಆಗ ಯೆಹೋಶುವನು ಯಾಜಕರಿಗೆ ಆಜ್ಞಾಪಿಸಿ--ಯೊರ್ದ ನಿನಿಂದ ಮೇಲಕ್ಕೆ ಬನ್ನಿರಿ ಎಂದು ಹೇಳಿದನು.