ನ್ಯಾಯವಾದಿಗಳು 11

ಇದಲ್ಲದೆ ಅವಳು ತನ್ನ ತಂದೆಗೆ --ಈ ಕಾರ್ಯವು ನನಗೆ ಆಗಲಿ; ಆದರೆ ನಾನು ನನ್ನ ಗೆಳತಿಯರೊಡನೆ ನನ್ನ ಕನ್ಯಾಭಾವಕ್ಕೋಸ್ಕರ ಬೆಟ್ಟಗಳ ಮೇಲೆ ಹೋಗಿ ಗೋಳಾಡುವಂತೆ ಎರಡು ತಿಂಗಳುಗಳ ವರೆಗೆ ನನ್ನನ್ನು ಬಿಡು ಅಂದಳು.

Judges 11:37 (UKJV) And she said unto her father, Let this thing be done for me: let me alone two months, that I may go up and down upon the mountains, and mourn for my virginity, I and my fellows.

35ಅವನು ಅವಳನ್ನು ನೋಡಿ ದಾಗ ತನ್ನ ವಸ್ತ್ರಗಳನ್ನು ಹರಕೊಂಡು--ಅಯ್ಯೋ, ನನ್ನ ಕುಮಾರ್ತೆಯೇ, ನೀನು ನನ್ನನ್ನು ಬಹಳವಾಗಿ ಕುಂದಿಸಿದಿ. ನನ್ನನ್ನು ತೊಂದರೆಪಡಿಸುವವರಲ್ಲಿ ನೀನು ಒಬ್ಬಳಾದಿ. ಯಾಕಂದರೆ ನಾನು ಕರ್ತನಿಗೆ ನನ್ನ ಬಾಯಿ ತೆರೆದು ಪ್ರಮಾಣಮಾಡಿದೆನು; ಹಿಂದೆಗೆಯಲಾರೆನು ಅಂದನು.

36ಅವಳು ಅವನಿಗೆ--ನನ್ನ ತಂದೆಯೇ, ಕರ್ತನು ಅಮ್ಮೋನನ ಮಕ್ಕಳಾದ ನಿನ್ನ ಶತ್ರುಗಳಿಗೆ ನಿನಗೋಸ್ಕರ ಮುಯ್ಯಿ ತೀರಿಸಿದ್ದರಿಂದ ಆತನಿಗೆ ನಿನ್ನ ಬಾಯಿಂದ ಹೊರಟ ಮಾತಿನ ಪ್ರಕಾರವೇ ನನಗೆ ಮಾಡು ಅಂದಳು.

37ಇದಲ್ಲದೆ ಅವಳು ತನ್ನ ತಂದೆಗೆ --ಈ ಕಾರ್ಯವು ನನಗೆ ಆಗಲಿ; ಆದರೆ ನಾನು ನನ್ನ ಗೆಳತಿಯರೊಡನೆ ನನ್ನ ಕನ್ಯಾಭಾವಕ್ಕೋಸ್ಕರ ಬೆಟ್ಟಗಳ ಮೇಲೆ ಹೋಗಿ ಗೋಳಾಡುವಂತೆ ಎರಡು ತಿಂಗಳುಗಳ ವರೆಗೆ ನನ್ನನ್ನು ಬಿಡು ಅಂದಳು.

38ಆಗ ಅವನು--ಎರಡು ತಿಂಗಳು ಹೋಗಿ ಬಾ ಎಂದು ಹೇಳಿ ಅವಳನ್ನು ಕಳುಹಿಸಿಬಿಟ್ಟನು. ಅವಳು ತನ್ನ ಗೆಳತಿ ಯರ ಸಂಗಡ ಹೋಗಿ ತನ್ನ ಕನ್ಯಾಭಾವಕ್ಕೋಸ್ಕರ ಬೆಟ್ಟಗಳ ಮೇಲೆ ಅತ್ತು,

39ಎರಡು ತಿಂಗಳು ತೀರಿದಾಗ ತನ್ನ ತಂದೆಯ ಬಳಿಗೆ ಬಂದಳು. ಆಗ ಅವನು ಮಾಡಿದ್ದ ತನ್ನ ಪ್ರಮಾಣದ ಪ್ರಕಾರ ಅವಳಿಗೆ ಮಾಡಿದನು. ಅವಳು ಪುರುಷನನ್ನು ಅರಿಯದೆ ಇದ್ದಳು.

Kannada Bible (Old Version), Bible Society of India.