4ಅವನು ಅವರಿಗೆವಿಾಕನು ನನಗೆ ಹೀಗೆ ಹೀಗೆ ನಡಿಸುತ್ತಾನೆ; ನನ್ನನ್ನು ಸಂಬಳಕ್ಕೆ ಇಟ್ಟು ಕೊಂಡಿದ್ದಾನೆ; ನಾನು ಅವನಿಗೆ ಯಾಜಕನಾಗಿದ್ದೇನೆ ಅಂದನು.
5ಆಗ ಅವರು ಅವನಿಗೆ--ನಾವು ಹೋಗುವ ನಮ್ಮ ಮಾರ್ಗವು ಸಫಲವಾಗುವದೋ? ಎಂದು ತಿಳಿಯುವ ಹಾಗೆ ದಯಮಾಡಿ ದೇವರನ್ನು ಕೇಳು ಅಂದರು.
6ಆ ಯಾಜಕನು--ಸಮಾಧಾನವಾಗಿ ಹೋಗಿರಿ; ನೀವು ಹೋಗುವ ನಿಮ್ಮ ಮಾರ್ಗವು ಕರ್ತನ ಮುಂದೆ ಅದೆ ಅಂದನು.
7ಆಗ ಆ ಐದು ಮಂದಿಯು ಹೊರಟು ಲಯಿಷಿಗೆ ಹೋಗಿ ಅದರಲ್ಲಿ ವಾಸಿಸಿರುವ ಆ ಜನರನ್ನು ನೋಡು ವಾಗ ಅವರು ನಿಶ್ಚಿಂತರಾಗಿಯೂ ಚೀದೋನ್ಯರ ಹಾಗೆ ನೆಮ್ಮದಿಯಾಗಿಯೂ ಸುರಕ್ಷಿತವಾಗಿಯೂ ಇದ್ದರು; ಯಾವ ಕಾರ್ಯದಲ್ಲಾದರೂ ನಾಚಿಕೆಪಡಿಸುವದಕ್ಕೆ ಬಿಗಿಹಿಡಿಯುವ ನ್ಯಾಯಾಧಿಪತಿಯು ದೇಶದಲ್ಲಿ ಇರ ಲಿಲ್ಲ; ಅವರು ಚೀದೋನ್ಯರಿಗೆ ದೂರವಾಗಿದ್ದರು; ಯಾವ ಮನುಷ್ಯನ ಸಂಗಡವೂ ಅವರಿಗೆ ಏನೂ ಕೆಲಸವಿರಲಿಲ್ಲ.
8ಅವರು ಚೊರ್ಗಾದಲ್ಲಿಯೂ ಎಷ್ಟಾ ವೋಲಿನಲ್ಲಿಯೂ ಇರುವ ಸಹೋದರರ ಬಳಿಗೆ ತಿರಿಗಿ ಬಂದರು. ಅವರ ಸಹೋದರರು ಅವರಿಗೆ--ನೀವು ಏನು ಹೇಳುತ್ತೀರಿ? ಅಂದರು.