1ಆಗ ಇಸ್ರಾಯೇಲ್ ಮಕ್ಕಳೆಲ್ಲರು ಹೊರಟು ಗಿಲ್ಯಾದು ಸಹಿತವಾಗಿ ದಾನ್ ಪಟ್ಟಣವು ಮೊದಲುಗೊಂಡು ಬೇರ್ಷೆಬದ ಮಟ್ಟಿಗೂ ಸಭೆಯು ಒಬ್ಬ ಮನುಷ್ಯನ ಹಾಗೆ ಮಿಚ್ಪೆಯಲ್ಲಿ ಕರ್ತನ ಮುಂದೆ ಕೂಡಿಕೊಂಡಿತು.
2ಇದಲ್ಲದೆ ಇಸ್ರಾಯೇಲಿನ ಸಮಸ್ತ ಗೋತ್ರಗಳಾದ ಸಮಸ್ತ ಜನರ ಮುಖ್ಯಸ್ಥರು ಬಿಚ್ಚು ಕತ್ತಿ ಹಿಡಿದುಕೊಂಡ ನಾಲ್ಕು ಲಕ್ಷ ಕಾಲಾಳುಗಳು ದೇವರ ಸಭೆಯಾದ ಜನರಲ್ಲಿಗೆ ಬಂದರು.
3ಇಸ್ರಾ ಯೇಲ್ ಮಕ್ಕಳು ಮಿಚ್ಪೆಗೆ ಬಂದ ವರ್ತಮಾನವನ್ನು ಬೆನ್ಯಾವಿಾನನ ಮಕ್ಕಳು ಕೇಳಿದರು). ಆಗ ಇಸ್ರಾ ಯೇಲ್ ಮಕ್ಕಳು--ನೀವು ಮಾತನಾಡಿರಿ; ಆ ಕೆಟ್ಟತನವು ಹೇಗೆ ಆಯಿತು? ಅಂದರು.
4ಯಾವನ ಹೆಂಡತಿ ಕೊಲ್ಲಲ್ಪಟ್ಟಳೋ ಆ ಪುರುಷನಾದ ಲೇವಿಯನು ಅವರಿಗೆ ಪ್ರತ್ಯುತ್ತರ ಕೊಟ್ಟು--ನಾನು ಬೆನ್ಯಾವಿಾನನ ಊರಾದ ಗಿಬೆಯಕ್ಕೆ ನನ್ನ ಉಪಪತ್ನಿ ಸಹಿತವಾಗಿ ಇಳುಕೊಳ್ಳು ವದಕ್ಕೆ ಬಂದೆನು.
5ಆದರೆ ಗಿಬೆಯ ಪಟ್ಟಣದವರು ನನಗೆ ವಿರೋಧವಾಗಿ ಎದ್ದು ನಾನು ಇಳಿದಿದ್ದ ಮನೆ ಯನ್ನು ರಾತ್ತಿಯಲ್ಲಿ ಮುತ್ತಿಕೊಂಡು ನನ್ನನ್ನು ಕೊಂದು ಹಾಕುವದಕ್ಕೆ ಆಲೋಚಿಸಿ ನನ್ನ ಉಪಪತ್ನಿಯನ್ನು ಕುಂದಿಸಿದರು; ಅವಳು ಸತ್ತುಹೋದಳು.