ಮತ್ತಾಯ 24

ಅವನನ್ನು ಆತನು ತನ್ನ ಎಲ್ಲಾ ಆಸ್ತಿಯ ಮೇಲೆ ನೇಮಿಸುವನೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.

Matthew 24:47 (UKJV) Verily I say unto you, That he shall make him ruler over all his goods.

45ಹಾಗಾದರೆ ತನ್ನ ಮನೆಯಲ್ಲಿದ್ದವರಿಗೆ ತಕ್ಕ ಕಾಲ ದಲ್ಲಿ ಆಹಾರ ಕೊಡುವಂತೆ ಅವರ ಮೇಲೆ ತನ್ನ ಯಜಮಾನನು ನೇಮಿಸಿದ ಅಧಿಕಾರಿಯೂ ನಂಬಿಗಸ್ತನೂ ಜ್ಞಾನಿಯೂ ಆದ ಸೇವಕನು ಯಾರು?

46ಯಜಮಾನನು ಬಂದು ಯಾವ ಸೇವಕನು ಹಾಗೆ ಮಾಡುವದನ್ನು ನೋಡುವನೋ ಆ ಸೇವಕನೇ ಧನ್ಯನು.

47ಅವನನ್ನು ಆತನು ತನ್ನ ಎಲ್ಲಾ ಆಸ್ತಿಯ ಮೇಲೆ ನೇಮಿಸುವನೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.

48ಆದರೆ ಆ ಕೆಟ್ಟ ಸೇವಕನು ತನ್ನ ಹೃದಯದಲ್ಲಿ--ನನ್ನ ಯಜಮಾನನು ಬರುವದಕ್ಕೆ ತಡಮಾಡುತ್ತಾನೆ ಎಂದು ಅಂದುಕೊಂಡು

49ತನ್ನ ಜೊತೇ ಸೇವಕರನ್ನು ಹೊಡೆಯುತ್ತಾ ಕುಡುಕರ ಸಂಗಡ ತಿನ್ನುವದಕ್ಕೂ ಕುಡಿಯುವದಕ್ಕೂ ಪ್ರಾರಂಭಿಸು ವದಾದರೆ

Kannada Bible (Old Version), Bible Society of India.