2ನಮ್ಮ ಪ್ರಿಯ ಅಪ್ಫಿಯಳಿಗೂ ನಮ್ಮ ಸಹಭಟನಾದ ಅರ್ಖಿಪ್ಪನಿಗೂ ನಿನ್ನ ಮನೆಯಲ್ಲಿ ಕೂಡುವ ಸಭೆಯವರಿಗೂ ಬರೆಯುವದೇನಂದರೆ--
3ನಮ್ಮ ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.
4ನನ್ನ ಪ್ರಾರ್ಥನೆಗಳಲ್ಲಿ ಯಾವಾಗಲೂ ನಿನ್ನನ್ನು ಜ್ಞಾಪಕಮಾಡಿಕೊಂಡು ನನ್ನ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ.
5ಕರ್ತನಾದ ಯೇಸುವಿನ ಮೇಲೆಯೂ ಪರಿಶುದ್ಧರೆಲ್ಲರ ಮೇಲೆಯೂ ನಿನಗಿರುವ ಪ್ರೀತಿಯನೂ ನಂಬಿಕೆಯನ್ನೂ ಕುರಿತು ಕೇಳಿದ್ದೇನೆ.
6ಹೀಗೆ ನಿನ್ನ ವಿಶ್ವಾಸದ ಅನ್ಯೋನ್ಯತೆಯು ಕ್ರಿಸ್ತ ಯೇಸುವಿನಲ್ಲಿ ಮತ್ತು ನಿನ್ನಲ್ಲಿರುವ ಎಲ್ಲಾ ಒಳ್ಳೇದರ ತಿಳುವಳಿಕೆಯಲ್ಲಿ ಬಲ ವಾಗಿರುವದು.