ಸ್ತುತಿಗಳು 123

ಪರಲೋಕದಲ್ಲಿ ವಾಸವಾಗಿರುವಾತನೇ, ನಿನ್ನ ಕಡೆಗೆ ನನ್ನ ಕಣ್ಣುಗಳನ್ನು ಎತ್ತುತ್ತೇನೆ.

Psalm 123:1 (UKJV) Unto you lift I up mine eyes, O you that dwell in the heavens.

1ಪರಲೋಕದಲ್ಲಿ ವಾಸವಾಗಿರುವಾತನೇ, ನಿನ್ನ ಕಡೆಗೆ ನನ್ನ ಕಣ್ಣುಗಳನ್ನು ಎತ್ತುತ್ತೇನೆ.

2ಇಗೋ, ದಾಸರ ಕಣ್ಣುಗಳು ತಮ್ಮ ಯಜಮಾನರ ಕೈಯನ್ನೂ ದಾಸಿಯ ಕಣ್ಣುಗಳು ತನ್ನ ಯಜಮಾನಿಯ ಕೈಯನ್ನೂ ನೋಡುವ ಪ್ರಕಾರವೇ, ನಮ್ಮ ದೇವರಾದ ಕರ್ತನು ನಮ್ಮನ್ನು ಕರುಣಿಸುವ ವರೆಗೆ ಆತನನ್ನೇ ನಿರೀಕ್ಷಿಸುತ್ತವೆ.

3ನಮ್ಮನ್ನು ಕರುಣಿಸು; ಓ ಕರ್ತನೇ, ನಮ್ಮನ್ನು ಕರುಣಿಸು; ಬಹಳವಾಗಿ ತಿರ ಸ್ಕಾರದಿಂದ ತುಂಬಿದ್ದೇವೆ.

Kannada Bible (Old Version), Bible Society of India.