48ನನ್ನ ಶತ್ರುಗಳಿಂದ ನನ್ನನ್ನು ತಪ್ಪಿಸುವನು; ಹೌದು, ನೀನು ನನ್ನ ಎದುರಾಳಿಗಳಿಂದ ತಪ್ಪಿಸಿ ನನ್ನನ್ನು ಮೇಲೆ ಎತ್ತುತ್ತೀ; ಬಲಾತ್ಕಾರ ಮಾಡುವವನಿಂದ ನನ್ನನ್ನು ಬಿಡಿಸಿದ್ದೀ.
49ಆದ್ದರಿಂದ ಓ ಕರ್ತನೇ, ಅನ್ಯಜನಾಂಗ ಗಳಲ್ಲಿ ನಿನಗೆ ಉಪಕಾರಸ್ತುತಿ ಮಾಡುತ್ತೇನೆ. ನಿನ್ನನ್ನು ಕೊಂಡಾಡಿ ನಿನ್ನ ಹೆಸರನ್ನು ಕೀರ್ತಿಸುವೆನು.
50ಆತನು ತನ್ನ ಅರಸನಿಗೆ ದೊಡ್ಡ ಬಿಡುಗಡೆಯನ್ನು ಕೊಟ್ಟು ತನ್ನ ಅಭಿಷಕ್ತನಾದ ದಾವೀದನಿಗೂ ಅವನ ಸಂತತಿಗೂ ಕೃಪೆಯನ್ನು ಎಂದೆಂದಿಗೂ ತೋರಿಸುತ್ತಾನೆ.