9ನಾನು ನೀತಿಯನ್ನು ದೊಡ್ಡ ಸಭೆಯಲ್ಲಿ ಸಾರಿಬಿಟ್ಟಿದ್ದೇನೆ; ಇಗೋ, ಓ ಕರ್ತನೇ, ನಾನು ನನ್ನ ತುಟಿಗಳಿಗೆ ಅಡ್ಡಿ ಮಾಡಲಿಲ್ಲವೆಂಬ ಸಂಗತಿ ನೀನು ತಿಳಿದವ ನಾಗಿದ್ದೀ.
10ನಿನ್ನ ನೀತಿಯನ್ನು ನನ್ನ ಹೃದಯದಲ್ಲಿ ಅಡಗಿಸಲಿಲ್ಲ; ನಿನ್ನ ನಂಬಿಕೆಯನ್ನೂ ರಕ್ಷಣೆಯನ್ನೂ ನಾನು ಪ್ರಕಟಿಸಿದ್ದೇನೆ; ನಿನ್ನ ಪ್ರೀತಿ ಕರುಣೆಗಳನ್ನೂ ಸತ್ಯವನ್ನೂ ದೊಡ್ಡ ಸಭೆಯಲ್ಲಿ ನಾನು ಮರೆಮಾಡಲಿಲ್ಲ.
11ಕರ್ತನೇ, ನಿನ್ನ ಅಂತಃಕರುಣೆಗಳನ್ನು ನನ್ನಿಂದ ಹಿಂತೆಗೆಯಬೇಡ; ನಿನ್ನ ಪ್ರೀತಿ ಕರುಣೆಗಳೂ ನಿನ್ನ ಸತ್ಯವೂ ಯಾವಾಗಲೂ ನನ್ನನ್ನು ಕಾಯಲಿ.
12ಲೆಕ್ಕ ವಿಲ್ಲದಷ್ಟು ಕೇಡುಗಳು ನನ್ನ ಸುತ್ತಲು ಆವರಿಸಿಕೊಂಡಿವೆ; ನಾನು ಮೇಲಕ್ಕೆ ನೋಡಲಾರದಷ್ಟು ನನ್ನ ಅಕ್ರಮ ಗಳು ನನ್ನನ್ನು ಹಿಡಿದವೆ; ಅವು ನನ್ನ ತಲೆಯ ಕೂದಲು ಗಳಿಗಿಂತ ಹೆಚ್ಚಾಗಿವೆ; ಆದದರಿಂದ ನನ್ನ ಹೃದಯವು ನನ್ನನ್ನು ಕುಂದಿಸಿತು.
13ಓ ಕರ್ತನೇ, ನನ್ನನ್ನು ಬಿಡಿಸು ವದಕ್ಕೆ ಇಷ್ಟವುಳ್ಳವನಾಗಿ, ಓ ಕರ್ತನೆ, ನನ್ನ ಸಹಾ ಯಕ್ಕೆ ತ್ವರೆಪಡು.