ಸ್ತುತಿಗಳು 41

ಆದರೆ ನೀನು, ಓ ಕರ್ತನೇ, ನನ್ನ ಮೇಲೆ ಕರುಣೆತೋರಿಸಿ ನನ್ನನ್ನು ಏಳಮಾಡು; ಆಗ ನಾನು ಅವರಿಗೆ ಪ್ರತೀಕಾರವನ್ನು ಮಾಡುವೆನು.

Psalm 41:10 (UKJV) But you, O LORD, be merciful unto me, and raise me up, that I may requite them.

8ಕೆಟ್ಟ ರೋಗವು ಅವನನ್ನು ಹಿಡಿದದೆ, ಈಗ ಅವನು ಮಲಗಿಕೊಂಡವನಾಗಿ ಎಂದಿಗೂ ಏಳನು ಎಂದು ಅವರು ಅನ್ನುತ್ತಾರೆ.

9ಹೌದು, ನನ್ನ ರೊಟ್ಟಿಯನ್ನು ತಿಂದಂಥ, ನಾನು ಭರವಸವಿಟ್ಟಂಥ, ನನ್ನ ಆಪ್ತ ಸ್ನೇಹಿತನು ನನಗೆ ವಿರೋಧವಾಗಿ ತನ್ನ ಕಾಲನ್ನು ಅಡ್ಡಗೊಟ್ಟಿದ್ದಾನೆ.

10ಆದರೆ ನೀನು, ಓ ಕರ್ತನೇ, ನನ್ನ ಮೇಲೆ ಕರುಣೆತೋರಿಸಿ ನನ್ನನ್ನು ಏಳಮಾಡು; ಆಗ ನಾನು ಅವರಿಗೆ ಪ್ರತೀಕಾರವನ್ನು ಮಾಡುವೆನು.

11ನನ್ನ ಶತ್ರು ನನ್ನ ಮೇಲೆ ಜಯಧ್ವನಿ ಮಾಡದೆ ಇರುವದ ರಿಂದಲೇ ನಿನ್ನ ಒಲುಮೆಯು ನನಗಿರುವ ದೆಂದು ನಾನು ಬಲ್ಲೆನು.

12ನನ್ನನ್ನಾದರೋ ನನ್ನ ಯಥಾರ್ಥ ತ್ವದಲ್ಲಿ ನೀನು ಉದ್ಧರಿಸಿ ನಿನ್ನ ಸಮ್ಮುಖದಲ್ಲಿ ಎಂದೆಂದಿಗೂ ನನ್ನನ್ನು ನಿಲ್ಲಿಸಿದ್ದೀ.

Kannada Bible (Old Version), Bible Society of India.