1 ಕೊರಿಂಥ 15

ನಾನು ನಿಮಗೆ ಸಾರಿರುವದನ್ನು ನೀವು ಜ್ಞಾಪಕದಲ್ಲಿಟ್ಟುಕೊಂಡವರಾಗಿದ್ದು ನಿಮ್ಮ ನಂಬಿಕೆಯು ವ್ಯರ್ಥವಾಗಿರದಿದ್ದರೆ ಅದರಿಂದಲೂ ನೀವು ರಕ್ಷಣೆ ಹೊಂದಿದ್ದೀರಿ.

1 Corinthians 15:2 (UKJV) By which also all of you are saved, if all of you keep in memory what I preached unto you, unless all of you have believed in vain.

1ಇದಲ್ಲದೆ ಸಹೋದರರೇ, ನಾನು ನಿಮಗೆ ಸಾರಿದ ಸುವಾರ್ತೆಯನ್ನು ತಿಳಿಯಪಡಿ ಸುತ್ತೇನೆ; ನೀವು ಅದನ್ನು ಅಂಗೀಕರಿಸಿದಿರಿ ಮತ್ತು ಅದರಲ್ಲಿ ನಿಂತಿದ್ದೀರಿ.

2ನಾನು ನಿಮಗೆ ಸಾರಿರುವದನ್ನು ನೀವು ಜ್ಞಾಪಕದಲ್ಲಿಟ್ಟುಕೊಂಡವರಾಗಿದ್ದು ನಿಮ್ಮ ನಂಬಿಕೆಯು ವ್ಯರ್ಥವಾಗಿರದಿದ್ದರೆ ಅದರಿಂದಲೂ ನೀವು ರಕ್ಷಣೆ ಹೊಂದಿದ್ದೀರಿ.

3ನಾನು ಸಹ ಎಲ್ಲಾದಕ್ಕಿಂತಲೂ ಮೊದಲು ಹೊಂದಿದ್ದನ್ನು ನಿಮಗೆ ತಿಳಿಸಿದ್ದೇನೆ. ಅದೇನಂದರೆ, ಬರಹದ ಪ್ರಕಾರ ಕ್ರಿಸ್ತನು ನಮ್ಮ ಪಾಪಗಳಿಗಾಗಿ ಸತ್ತನು.

4ಹೂಣಲ್ಪಟ್ಟನು; ಬರಹದ ಪ್ರಕಾರವೇ ಆತನು ಮೂರನೆಯ ದಿನದಲ್ಲಿ ತಿರಿಗಿ ಎದ್ದುಬಂದನು.

Kannada Bible (Old Version), Bible Society of India.