1ದಾವೀದನ ಸಾಯುವ ಕಾಲವು ಸವಿಾಪಿಸಿದ್ದರಿಂದ ಅವನು ತನ್ನ ಮಗನಾದ ಸೊಲೊಮೋನನಿಗೆ ಆಜ್ಞಾಪಿಸಿದ್ದೇನಂದರೆ
2ಭೂಮಿಯಲ್ಲಿರುವವರೆಲ್ಲರೂ ಹೋಗುವ ಮಾರ್ಗ ವಾಗಿ ನಾನೂ ಹೋಗುತ್ತೇನೆ; ನೀನು ಬಲಗೊಂಡು ಶೂರನಾಗಿರು.
3ನೀನು ಏನು ಮಾಡಿದರೂ ಎಲ್ಲಿ ಸಂಚರಿಸಿದರೂ ಎಲ್ಲಾದರಲ್ಲಿ ಬುದ್ಧಿಯುಳ್ಳವನಾಗಿರು ವದಕ್ಕೂ ಕರ್ತನು ನನ್ನನ್ನು ಕುರಿತು--ನಿನ್ನ ಮಕ್ಕಳು ತಾವು ಪೂರ್ಣಹೃದಯದಿಂದಲೂ ಪೂರ್ಣಪ್ರಾಣ ದಿಂದಲೂ ನನ್ನ ಮುಂದೆ ಸತ್ಯವಾಗಿ ನಡೆದುಕೊಳ್ಳುವ ಹಾಗೆ ತಮ್ಮ ಮಾರ್ಗವನ್ನು ಕಾದುಕೊಂಡರೆ ಇಸ್ರಾ ಯೇಲಿನ ಸಿಂಹಾಸನದ ಮೇಲೆ ಕೂಡ್ರತಕ್ಕವರಲ್ಲಿ ನಿನಗೆ ಕೊರತೆ ಇರುವದಿಲ್ಲ ಎಂದು ಹೇಳಿದ ತನ್ನ ವಾಕ್ಯವನ್ನು ಸ್ಥಿರಪಡಿಸುವದಕ್ಕೂ